Thursday, April 10, 2025
ಸುದ್ದಿ

ಉಡುಪಿಯ ಪುಟಾಣಿ ಶ್ಲಾಘಳಿಗೆ ಅಂತರರಾಷ್ಟ್ರೀಯ ಪ್ರಶಸ್ತಿ – ಕಹಳೆ ನ್ಯೂಸ್

ಉಡುಪಿ: “ಕಟಕ” ಸಿನಿಮಾದಲ್ಲಿನ ಅಭಿನಯಕ್ಕಾಗಿ ಬಾಲ ಪ್ರತಿಭೆ ಸಾಲಿಗ್ರಾಮ ಮೂಲದ ಶ್ಲಾಘಗಳಿಗೆ ಪ್ರತಿಷ್ಠಿತ ಸೌತ್ ಇಂಡಿಯನ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸಿಮಾ) ಲಭಿಸಿದೆ. ಸೆ. 15ರಂದುದುಬೈಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ನಟ ಮಾಧವ ಕಾರ್ಕಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತನ್ನ 4ನೇ ವಯಸ್ಸಿನಲ್ಲಿ ಸಚಿನ್ ಬಸ್ರುರೂ ನಿರ್ದೇಶನದ “ಅಮ್ಮ’ ಆಲ್ಬಮ್ ಸಾಂಗ್ ನಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಳು.ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರುರೂ ನಿರ್ದೇಶನದ “ಕಟಕ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯಳಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲಿಗ್ರಾಮದ ನಿವಾಸಿ ಕುಂದಾಪುರದ ಕೆ. ರಾಘವೇಂದ್ರ ಆಚಾರ್ ಮತ್ತು ಮಾಲಾ ದಂಪತಿಯ ಪುತ್ರಿಯಾದ ಈಕೆ 200ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾಳೆ. ಮೂಡುಬಿದಿರೆ ಯಲ್ಲಿ ನಡೆದ “ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನ’ ದಲ್ಲಿ “ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಈಕೆ ತೆಕ್ಕಟ್ಟೆ ವಿಶ್ವ ವಿನಾಯಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ