Thursday, January 23, 2025
ಸುದ್ದಿ

ರೆಂಜಾಳ : ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿ ಬಿಜೆಪಿಗೆ ಸೇರ್ಪಡೆ – ಕಹಳೆ ನ್ಯೂಸ್

ಕಾರ್ಕಳ : ರೆಂಜಾಳ ಗ್ರಾಮ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪದಾಧಿಕಾರಿ, ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಮಲ್ಲಿಕಾ ಶೆಟ್ಟಿಯವರು ಇಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರದಾದ್ಯಂತ ಹಾಗೂ ರೆಂಜಾಳ ಗ್ರಾಮದಲ್ಲಿ ನಡೆಸಿದ ಅಭಿವೃದ್ಧಿ ಚಟುವಟಿಕೆಗಳನ್ನು ಮತ್ತು ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆಯವರು ಬಿಜೆಪಿ ಪಕ್ಷದ ಶಾಲು ಮತ್ತು ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಭಾರಿಗಳಾದ ಬಾಹುಬಲಿ ಪ್ರಸಾದ್, ಶರತ್ ಶೆಟ್ಟಿ ರೆಂಜಾಳ, ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ದೀಪಿಕಾ ಶೆಟ್ಟಿ, ವೃಷಭರಾಜ್ ಜೈನ್, ಯೋಗೀಶ್ ದೇವಾಡಿಗ, ರಾಜೇಶ್ ಶೆಟ್ಟಿ, ಸತೀಶ್, ಪದ್ಮರಾಜ್ ಶೆಟ್ಟಿ, ಸುನಂದಾ, ಪುಷ್ಪಾ ಗೌಡ ಮೊದಲಾದವರು ಉಪಸ್ಥಿತರಿದ್ದರು.