Thursday, January 23, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಮೋದಿ ಸಮುದಾಯ ಅವಮಾನಿಸಿ ರಾಹುಲ್ ಗಾಂಧಿಗೆ ಶಿಕ್ಷೆಯಾಗಿದೆ, ಅದೇ ರೀತಿ ಕರ್ನಾಟಕದ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ ಸಿದ್ದರಾಮಯ್ಯಗೂ ಶಿಕ್ಷೆಯಾಗಬೇಕು ; ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ – ಕಹಳೆ ನ್ಯೂಸ್

ಲಿಂಗಾಯಿತ ಸಿಎಂ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ಹೊರ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕರ್ನಾಟಕದ ಏಳು ಕೋಟಿ ಜನರಿಗೆ ಮಾಡಿರುವ ಅವಮಾನ.

ಇಡೀ ಲಿಂಗಾಯತ ಸಮಾಜಕ್ಕೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಿದ್ಧರಾಮಯ್ಯ ಹೇಳಿಕೆ ಖಂಡನೀಯ ಎಂದರು.

ಇದೀಗ ಸಿದ್ದರಾಮಯ್ಯರ ಒಂದು ಮುಖ ಬಯಲಾದಂತಾಗಿದೆ. ಈ ಹಿಂದೆ ವೀರಶೈವ-ಲಿಂಗಾಯತ ಸಮುದಾಯ ಒಡೆಯಲು ಯತ್ನ ಮಾಡಿದ್ದರು. ಲಿಂಗಾಯತರ ಮೇಲೆ ಸಿದ್ದರಾಮಯ್ಯಗೆ ಇರುವ ಭಾವನೆ ವ್ಯಕ್ತವಾಗಿದೆ. ಮೋದಿ ಸಮುದಾಯ ಅವಮಾನಿಸಿ ರಾಹುಲ್ ಶಿಕ್ಷೆಗೊಳಗಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯಗೂ ಶಿಕ್ಷೆಯಾಗಬೇಕು ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಕಟೀಲ್‌ ಅವರು ವಾಗ್ದಾಳಿ ನಡೆಸಿದ್ದಾರೆ.