Thursday, January 23, 2025
ಸುದ್ದಿ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ : ಪುತ್ತೂರಿನಲ್ಲೇ ಅತ್ಯಧಿಕ ಪರ್ಸೆಂಟ್ ಡಿಸ್ಟಿಂಕ್ಷನ್ ದಾಖಲಿಸಿದ ಅಂಬಿಕಾ ವಿದ್ಯಾಲಯ – ಕಹಳೆ ನ್ಯೂಸ್

ಪುತ್ತೂರು: ಪಿಯು ಫಲಿತಾಂಶದಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ್ರ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ನೂತನ ದಾಖಲೆ ಬರೆದಿವೆ. ಬಪ್ಪಳಿಗೆಯಲ್ಲಿರುವ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜು ಹಾಗೂ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ ಕಾಲೇಜುಗಳೆರಡರಲ್ಲೂ ಶೇ.100 ಫಲತಾಂಶ ದಾಖಲೆಯಾಗುವುದರ ಮೂಲಕ ಅಂಬಿಕಾದ ಗುಣಮಟ್ಟ ಪ್ರಕಟಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದಲ್ಲದೆ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿಯೇ ಮೊದಲ ಹತ್ತು ರ್ಯಾಂಕ್ ಒಳಗೆ ಅಂಬಿಕಾದ ವಿದ್ಯಾರ್ಥಿಗಳು ಆರು ರ‍್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ. ಕೊಕ್ಕಡದ ಶ್ರೀಶ ಶರ್ಮ 591 (ಭೌತಶಾಸ್ತ್ರ 99, ರಸಾಯನಶಾಸ್ತ್ರ 99, ಗಣಿತಶಾಸ್ತ್ರ 100, ಹಾಗೂ ಕಂಪ್ಯೂಟರ್ ಸೈನ್ಸ್ 100) ಅಂಕಗಳನ್ನು ಗಳಿಸಿ ರಾಜ್ಯದಲ್ಲಿಯೇ ಆರನೇ ರಾಂಕ್ ಗಳಿಸಿರುತ್ತಾರೆ.

ಸುಳ್ಯದ ಧೀರಜ್ ಬಿ.ಎಸ್ 590 (ಭೌತಶಾಸ್ತ್ರ 100, ರಸಾಯನಶಾಸ್ತ್ರ 98, ಗಣಿತಶಾಸ್ತ್ರ 100, ಹಾಗೂ ಜೀವಶಾಸ್ತ್ರ 99) ಹಾಗೂ ಬನ್ನೂರಿನ ಲಯ ರವೀಂದ್ರನ್ ತಲಾ 590 (ಭೌತಶಾಸ್ತ್ರ 99, ರಸಾಯನಶಾಸ್ತ್ರ 100, ಗಣಿತಶಾಸ್ತ್ರ 99, ಹಾಗೂ ಜೀವಶಾಸ್ತ್ರ 100) ಅಂಕಗಳನ್ನು ದಾಖಲಿಸಿ ಅಂಕ ಗಳಿಸಿ ರಾಜ್ಯದಲ್ಲಿ ಏಳನೇ ರಾಂಕ್ ಅನ್ನು ಹಂಚಿಕೊಂಡಿದ್ದಾರೆ.
ಬನ್ನೂರಿನ ಮೇಧಾ ಭಟ್ ಕೋಟೆ 588 (ಭೌತಶಾಸ್ತ್ರ 98, ರಸಾಯನಶಾಸ್ತ್ರ 98, ಗಣಿತಶಾಸ್ತ್ರ 100, ಹಾಗೂ ಜೀವಶಾಸ್ತ್ರ 97) ಒಂಬತ್ತನೇ ರ್ಯಾಂಕ್ ದಾಖಲಿಸಿದರೆ, ಬೆಟ್ಟಂಪಾಡಿಯ ಶ್ರಾವಣಿ ಬಿ 587 (ಭೌತಶಾಸ್ತ್ರ 98, ರಸಾಯನಶಾಸ್ತ್ರ 99, ಗಣಿತಶಾಸ್ತ್ರ 99, ಹಾಗೂ ಜೀವಶಾಸ್ತ್ರ 100) ಹಾಗೂ ಕಾಸರಗೋಡಿನ ಪ್ರಣಮ್ಯ ಬಿ 587 (ಭೌತಶಾಸ್ತ್ರ 99, ರಸಾಯನಶಾಸ್ತ್ರ 98, ಗಣಿತಶಾಸ್ತ್ರ 99 ಹಾಗೂ ಜೀವಶಾಸ್ತ್ರ 100 ) ಅಂಕಗಳೊಂದಿಗೆ ಹತ್ತನೇ ರಾಂಕ್ ಅನ್ನು ಹಂಚಿಕೊಂಡಿರುತ್ತಾರೆ.

ಅತ್ಯಧಿಕ ಪರ್ಸೆಂಟೇಜ್ ಡಿಸ್ಟಿಂಕ್ಷನ್: ಅಂಬಿಕಾ ಪದವಿಪೂರ್ವ ವಿದ್ಯಾಲಯಗಳೆರಡರಲ್ಲೂ ಅತ್ಯುತ್ತಮ ಸಂಖ್ಯೆಯಲ್ಲಿ ಡಿಸ್ಟಿಂಕ್ಷನ್ ದಾಖಲಾಗಿದೆ. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪರೀಕ್ಷೆ ಬರೆದ ಒಟ್ಟು 222 ಮಂದಿ ವಿದ್ಯಾರ್ಥಿಗಳಲ್ಲಿ 136 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದು, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪರೀಕ್ಷೆ ಬರೆದ 118 ಮಂದಿ ವಿದ್ಯಾರ್ಥಿಗಳಲ್ಲಿ 72 ಮಂದಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.
ಇದರಿಂದಾಗಿ ಎರಡೂ ಸಂಸ್ಥೆಗಳಲ್ಲಿ ಪರೀಕ್ಷೆ ಬರೆದ ಒಟ್ಟು 340 ಮಂದಿ ವಿದ್ಯಾರ್ಥಿಗಳಲ್ಲಿ 208 ಮಂದಿ ಡಿಸ್ಟಿಂಕ್ಷನ್ ದಾಖಲಿಸುವ ಮೂಲಕ 61 ಶೇಕಡಾದಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದ ಸಾಧನೆ ದಾಖಲಾಗಿದ್ದು, ಪುತ್ತೂರಿಗೆ ಹೊಸ ಶೈಕ್ಷಣಿಕ ದಾಖಲೆಯನ್ನು ಅಂಬಿಕಾ ತಂದುಕೊಟ್ಟಿದೆ.

ಈ ಮಧ್ಯೆ ವಿಜ್ಞಾನದಲ್ಲಿ ಮಾತ್ರವಲ್ಲದೆ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗ ಆರಂಭವಾದಾಗಿನಿಂದಲೂ ಶೇಕಡಾ ನೂರು ಫಲಿತಾಂಶ ದಾಖಲಾಗುತ್ತಿರುವುದು ಗಮನಾರ್ಹ. ಪರೀಕ್ಷೆ ಬರೆದ 24 ಮಂದಿ ವಿದ್ಯಾರ್ಥಿಗಳಲ್ಲಿ 10 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.

  1. ಶ್ರೀಶ ಶರ್ಮ
  2. ಧೀರಜ್ ಬಿ.ಎಸ್
  3. ಲಯ ರವೀಂದ್ರನ್
  4. ಮೇಧಾ ಭಟ್ ಕೋಟೆ
  5. ಶ್ರಾವಣಿ ಬಿ
  6. ಪ್ರಣಮ್ಯ ಬಿ

ಅಂಬಿಕಾದ ಗುಣಮಟ್ಟ ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ಎರಡೂ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಾಗಿರುವುದು ನಮ್ಮ ಶ್ರಮಕ್ಕೆ ಸಾರ್ಥಕತೆಯನ್ನು ತಂದಿದೆ. ಹತ್ತನೆಯ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿ ಬಂದವರೂ ಪಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿರುವುದು ನಮ್ಮ ಗುಣಮಟ್ಟವನ್ನು ಸಾಕ್ಷೀಕರಿಸಿದೆ

ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು,
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

ರಾಜ್ಯದ ಟಾಪ್ 10 ರಾಂಕ್‍ಗಳಲ್ಲಿ ಅಂಬಿಕಾದ ವಿದ್ಯಾರ್ಥಿಗಳು ಆರು ರಾಂಕ್ ದಾಖಲಿಸಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಗಮನಹರಿಸಿ, ಆತ ಉತ್ಕೃಷ್ಟ ಸಾಧನೆಯನ್ನು ಮಾಡುವಂತಹ ಪ್ರಯತ್ನವನ್ನು ಅಂಬಿಕಾದಲ್ಲಿ ನಡೆಸಲಾಗುತ್ತದೆ. ಈ ಬಾರಿಯ ಫಲತಾಂಶ ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ.

ರಾಜಶ್ರೀ ಎಸ್ ನಟ್ಟೋಜ, ಕೋಶಾಧಿಕಾರಿಗಳು,
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು