Sunday, January 19, 2025
ಸುದ್ದಿ

ಕಾರು ಹರಿದು ಬೈಕ್ ಸವಾರ ಮೃತ್ಯು – ಕಹಳೆ ನ್ಯೂಸ್

ಉಡುಪಿ: ಕಾರು ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ.

ಹಾಲಾಡಿ- ಕೋಟೇಶ್ವರ ರಸ್ತೆಯ ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು ಬಂತೆಂದು ಕಾರು ಚಾಲಕ ದಿಢೀರನೆ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಗಂಗಾಧರ ಬೈಕ್ ಕಾರಿಗೆ ಡಿಕ್ಕಿ ಹೊಡೆಯಿತು. ಇದೇ ಸಂದರ್ಭದಲ್ಲಿ ಅವರ ಹಿಂದಿನಿಂದ ಬಂದ ಮತ್ತೊಂದು ಕಾರು ಗಂಗಾಧರ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಗಂಗಾಧರ ಅವರು ಹಾಲಾಡಿಯಲ್ಲಿ ಗ್ಯಾರೇಜ್ ಮಾಲಕ ರುದ್ರ ಆಚಾರ ಅವರ ಮಗನಾಗಿದ್ದು, ಎರಡು ವರ್ಷದ ಹಿಂದೆ ಮದುವೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು