ಕರಿಯಂಗಳ ಗ್ರಾಮಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ಬಂಟ್ವಾಳ : “ನಿಮ್ಮ ಬೂತ್ ಗಳಲ್ಲಿ ಮತದಾರರನ್ನು ಬೇಟಿ ಮಾಡಿ, ಪ್ರತಿ ಮತಗಳನ್ನು ಬಿಜೆಪಿ ಪಕ್ಷಕ್ಕೆ ಸಿಗುವಂತೆ ಮಾಡಿ ಹಾಗಾದರೆ ಗೆಲುವು ನಿಶ್ಚಿತ” ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಕರಿಯಂಗಳ ಗ್ರಾಮಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿ, ಬಳಿಕ ಕಾರ್ಯಕರ್ತರ ಜೊತೆಗೆ ಮಾತನಾಡಿದರು.
ಚುನಾವಣೆ ನಡೆಯವವರೆಗೆ ಪ್ರತಿ ಕ್ಷಣವನ್ನು ಬಿಜೆಪಿಯ ಗೆಲುವಿಗಾಗಿ ಮೀಸಲಿಡಿ, ಮುಂದಿನ ಐದು ವರ್ಷಗಳ ಕಾಲ ಬಿಜೆಪಿ ಪಕ್ಷ ಕಾರ್ಯಕರ್ತರಿಗಾಗಿ ಶ್ರಮಿಸುತ್ತದೆ ಎಂದು ಭರವಸೆ ನೀಡಿದರು.
ಭ್ರಷ್ಟಾಚಾರದಲ್ಲಿ ಜನರ ಹಣವನ್ನು ಸುಳಿಗೆ ಮಾಡಿದ ಕಾಂಗ್ರೆಸ್ ಗೆ ಸೋಲಿನ ಭೀತಿಯಿಂದ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದೆ.
ಬಿಜೆಪಿಯ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಕಾರ್ಯಕರ್ತರು ಮನೆಮನೆಗೆ ಹೋಗಿ ನೆನಪಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಕಾರ್ಯಕರ್ತರು ಗೌರವದಿಂದ ಮತ ಕೇಳುಬಹುದು. ಕಾರ್ಯಕರ್ತರು ಜೊತೆಯಾಗಿ ಅಭಿವೃದ್ಧಿಯನ್ನು ಮುಂದಿಟ್ಟಕೊಂಡು ಮತಯಾಚನೆ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಹಿಂದೂ ಯುವಕರ ಮೇಲೆ ಸುಳ್ಳು ಕೇಸು ದಾಖಲಿಸಿ, ಅಶಾಂತಿ ವಾತವರಣ ಸೃಷ್ಟಿಸಿದ ಕಾಂಗ್ರೆಸ್ ಅಭ್ಯರ್ಥಿ ಮತ್ತೆ ಈ ಬಾರಿ ನನ್ನ ಕಡೆಯ ಚುನಾವಣೆ ಎಂದು ಕಣ್ಣೀರು ಸುರಿಸಿ, ಮತ ನೀಡಿ ಎಂದು ಕೈ ಕಾಲು ಹಿಡಿಯುವ ಕೆಲಸ ಮಾಡುತ್ತಿದ್ದು, ಮತದಾರರು ಎಚ್ಚರಿಕೆಯಿಂದ ಇರಬೇಕು.
ಅವರ ಮೊಸಲೆ ಕಣ್ಣೀರಿಗೆ ಮರುಳಾಗಿ ಕಾಂಗ್ರೇಸ್ ಗೆ ಮತನೀಡಿದರೆ ಮತ್ತೆ ಬಂಟ್ವಾಳದಲ್ಲಿ ಕೋಮುಗಲಭೆಗೆ ನಾವು ಸಹಕಾರ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಶಾಂತಿಯ ಬಂಟ್ವಾಳವನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಅಭಿವೃದ್ಧಿಗಾಗಿ ರಾಜೇಶ್ ನಾಯ್ಕ್ ಅವರನ್ನು ಈ ಬಾರಿ ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ನಾವಡ, ಗ್ರಾ.ಪಂ.ಸದಸ್ಯ ಲೋಕೇಶ್ ಭರಣಿ, ಚಂದ್ರಾವತಿ ಪೊಳಲಿ, ಪ್ರಮುಖರಾದ ಸುಕೇಶ್ ಚೌಟ, ಬಂಟ್ವಾಳ ಯುವಮೋರ್ಚಾದ ಅದ್ಯಕ್ಷ ಕಿಶೋರ್ ಪಲ್ಲಿಪಾಡಿ, ತಾ.ಪಂ.ಮಾಜಿ ಸದಸ್ಯ ಯಶವಂತ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.