Saturday, January 25, 2025
ಸುದ್ದಿ

ಬಿಜೆಪಿ ಕಾರ್ಯಕರ್ತರೊಂದಿಗೆ ಹಲವು ಕಡೆಗಳಲ್ಲಿ ಮತಯಾಚನೆ ಮಾಡಿದ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಬೋಳೂರು ವಾರ್ಡಿನ ಸುಲ್ತಾನ್ ಬತ್ತೇರಿ, ಬೋಳೂರು ಪರಿಸರದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಮತಯಾಚನೆ ನಡೆಸಿದರು.

ಮನೆ ಮನೆ ಪ್ರಚಾರಕ್ಕೆ ಆಗಮಿಸಿದ ಕಾಮತ್ ಅವರನ್ನು ಸ್ಥಳೀಯರು ಆರತಿ ಎತ್ತಿ ಸ್ವಾಗತಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದವ್ಯಾಸ್ ಕಾಮತ್ ಅವರು, ನಗರದ ಅಭಿವೃದ್ಧಿಗೆ ಐದು ವರ್ಷದ ಅವಧಿಯಲ್ಲಿ ದಾಖಲೆ ಪ್ರಮಾಣದ ಅನುದಾನ ತಂದಿದ್ದೇನೆ. ಅಭಿವೃದ್ಧಿಯ ಮೂಲಕ ಅನೇಕ ಬದಲಾವಣೆಗಳನ್ನು ತಂದಿದ್ದೇನೆ. ನನ್ನ ಕನಸಿನ ಅನೇಕ ಯೋಜನೆಗಳನ್ನು ಜಾರಿಗೊಳಿಸಲು ಮತ್ತೊಮ್ಮೆ ಬೆಂಬಲ ನೀಡುವಂತೆ ಕೋರಿದರು.
ಈ ವೇಳೆ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಹಕ್ಕುಪತ್ರ ವಿತರಿಸಿದ ಕುರಿತು ಸ್ಥಳೀಯರು ನೆನಪಿಸಿಕೊಂಡರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ಬೋಳೂರು ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಉತ್ತರ ಶಕ್ತಿ ಕೇಂದ್ರದ ಕಾರ್ಯದರ್ಶಿ ರಾಹುಲ್ ಶೆಟ್ಟಿ , ಭಾರತೀಯ ಜನತಾ ಪಾರ್ಟಿ ಬೋಳೂರು ವಾರ್ಡ್ ಶಕ್ತಿ ಕೇಂದ್ರ ಅಧ್ಯಕ್ಷರು ಕಾರ್ತಿಕ್ ಬಂಗೇರ ಹಾಗೂ ದಿನೇಶ್ ಕರ್ಕೇರ, ಬೂತ್ ಅಧ್ಯಕ್ಷರುಗಳಾದ ಉಮಾಶಂಕರ್ ,ಮನೋಜ್ ಪುತ್ರನ್, ರಾಧಾಕೃಷ್ಣ ಶೇಟ್, ಮಹಾಬಲ, ಮುರಳಿ, ಗಣೇಶ್ ನಾಡಾರ್, ಪುರಂದರ ಶೆಟ್ಟಿ, ಗೀತ ಉರ್ವ, ಪ್ರಮುಖರಾದ ವಸಂತ್ ಜೆ ಪೂಜಾರಿ, ಪದ್ಮನಾಭ ಪುತ್ರನ್, ಯೋಗೀಶ್ ಸಾಲ್ಯಾನ್, ಸಿಪಿ ಚಂದ್ರಹಾಸ್ , ವಿಜಯೇಂದ್ರ ಸಾಲ್ಯಾನ್, ಅಶೋಕ್ ಕಾಂಚನ್, ಶಶಿ ಕುಮಾರ್, ಅನಿಲ್ ಸುವರ್ಣ, ನೂತನ್, ಗೌತಮ್ , ಸಂದೀಪ್ ಸಾಲ್ಯಾನ್ , ರತ್ನೋಜಿ , ಯಜ್ಣೇಶ್ ಗಟ್ಟಿ , ರೋಶನ್ ಹಾಗೂ ಇತರ ಪ್ರಮುಖರು ಭಾಗವಹಿಸಿದರು.