Friday, January 24, 2025
ಬೆಂಗಳೂರುಸಿನಿಮಾಸುದ್ದಿ

ಯುವ ಪ್ರತಿಭೆಗಳ ಭಾವನೆಗಳ ಪಯಣ “ಕಲರ‍್ಸ್ ಆಫ್ ಲವ್” ; ಮಂಗಳೂರು ಕಡಲತೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ – ಕಹಳೆ ನ್ಯೂಸ್

ಬೆಂಗಳೂರು : ಕಿರುಚಿತ್ರ ಹಾಗೂ ’ಲಗೋರಿ’ ಎಂಬ ಟೆಲಿಫಿಲಿಂ ಮಿಲಯಿನ್ಸ್‌ಗಟ್ಟಲೆ ವೀಕ್ಷಣೆಗೊಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಹುಮ್ಮಸಿನಿಂದ ನಿರ್ದೇಶಕ ಯು.ವಿ.ಹರಿಶೌರ್ಯ ಮೂರನೇ ಪ್ರಯತ್ನ ಎನ್ನುವಂತೆ ’ಕಲರ‍್ಸ್ ಆಫ್ ಲವ್’ ಎನ್ನುವ ೫೦ ನಿಮಿಷದ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಒಂದು ಕಾವ್ಯಾತ್ಮಕ ಪ್ರೀತಿ ಕಥೆ ಎಂದು ಇಂಗ್ಲೀಷ್‌ನಲ್ಲಿ ಅಡಿಬರಹವಿದೆ. ಗ್ಯಾಂಗ್‌ಬ್ಯಾಂಗ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚೇತನ್‌ಕುಮಾರ್ ಮತ್ತು ಜಯಪ್ರಕಾಶ್ ಬಂಡವಾಳ ಹೂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಥಾನಾಯಕ ಒಬ್ಬ ಬರಹಗಾರ. ’ಕಲರ‍್ಸ್ ಆಫ್ ಲವ್’ ಎನ್ನುವ ಪುಸ್ತಕವನ್ನು ಬರೆದು ಮುಗಿಸುವುದೇ ಇವನ ಗುರಿಯಾಗಿರುತ್ತದೆ. ಈ ಮಧ್ಯೆ ಪ್ರೀತಿಯ ಬಲೆಗೆ ಸಿಲುಕುತ್ತಾನೆ. ಆದರೆ ಅವಳು ಮನೆಯವರ ಒತ್ತಾಯದ ಮೇಲೆ ಬೇರೋಬ್ಬನನ್ನು ಮದುವೆಯಾಗುತ್ತಾಳೆ. ಇದರಿಂದ ಬೇಸರಗೊಂಡು ಪ್ರೀತಿ ಎನ್ನುವುದು ಇಷ್ಟೇ ಅಂದುಕೊಂಡು ಬರೆಯುವುದರ ಮೇಲೆ ಗಮನ ಹರಿಸುತ್ತಾಳೆ. ಅಲ್ಲಿ ಇವನ ಒಳ್ಳೆ ಗುಣ ಕಂಡು ಹುಡುಗಿಯೊಬ್ಬಳು ಹಿಂದೆ ಬೀಳುತ್ತಾಳೆ. ಈತ ಮಾತ್ರ ಇವಳಿಂದ ದೂರ ಹೋಗಲು ಪ್ರಯತ್ನಪಟ್ಟರೂ ಆಕೆ ನೀನಿಲ್ಲದೆ ನಾನಿಲ್ಲವೆಂದು ಹೇಳುತ್ತಲೇ ಇರುತ್ತಾಳೆ. ಕೊನೆಗೆ ತನ್ನ ಗುರಿಯನ್ನು ಸಾಧಿಸುತ್ತಾನಾ? ಅಥವಾ ಅವಳ ಕೋರಿಕೆಗೆ ಮಾರು ಹೋಗುತ್ತಾನಾ? ಎನ್ನುವುದನ್ನು ’ಆದ್ಯ ಯೂ ಟ್ಯೂಬ್’ದಲ್ಲಿ ವೀಕ್ಷಿಸಬಹುದಾಗಿದೆ.

ಪ್ರಚಾರದ ಮೊದಲ ಹಂತವಾಗಿ ಗಣ್ಯರು, ಮಾದ್ಯಮದವರಿಗೆ ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲಾಗಿತ್ತು. ಕ್ರಿಸ್ಟಲ್ ಸಂಸ್ಥೆ ಮಾಲೀಕ, ನಿರ್ಮಾಪಕ ಚಂದ್ರಶೇಖರ್ ಮಾತನಾಡಿ ನಿರ್ದೇಶಕರು ಬ್ಯಾಂಕ್ ಕೆಲಸಕ್ಕೆ ರಾಜಿನಾಮೆ ನೀಡಿ ಸಿನಿಮಾರಂಗಕ್ಕೆ ಬಂದಿದ್ದಾರೆ. ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಮುಂದೆ ಸ್ಟಾರ್ ನಿರ್ದೇಶಕರ ಸ್ಥಾನದಲ್ಲಿ ಬರುವ ಲಕ್ಷಣಗಳು ಕಾಣುತ್ತದೆ. ಒಳ್ಳೆಯದಾಗಲಿ ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ಮುಂಡಾಡಿ ನಿಜವಾಗಲೂ ಉತ್ತಮ ಚಿತ್ರವನ್ನು ನೋಡಿದಂತೆ ಆಗಿದೆ. ಇಂತಹವರು ಸಿನಿಮಾರಂಗಕ್ಕೆ ಬೇಕಾಗಿದ್ದಾರೆ. ನಿಮ್ಮ ಪ್ರಯತ್ನಗಳು ಮುಂದುವರೆಯಲಿ ಅಂತ ತಂಡಕ್ಕೆ ಶುಭಹಾರೈಸಿದರು.

ಮಂಗಳೂರು ಪ್ರತಿಭೆ ಮನಿಷ್‌ಕೊಟ್ಯಾನ್ ನಾಯಕ. ಮಂಗಳೂರಿನವರೇ ಆದ ಯುವ ಪ್ರತಿಭೆ ಅನುಷರಾಜ್, ಹಾಸನ ಮೂಲದ ಪ್ರನುಪಗೌಡ ನಾಯಕಿಯರು. ಖಳನಾಗಿ ರಾಣಾರಂಜಿತ್ ಉಳಿದಂತೆ ಅಭಿಷೇಕ್‌ಶೆಟ್ಟಿ, ರವಿಲೀ, ರಾಘವ್‌ಸೂರಿ ಮುಂತಾದವರು ನಟಿಸಿದ್ದಾರೆ. ಸಂಗೀತ ಅಕ್ಷಯ್.ಎಸ್.ರಿಷಬ್, ಛಾಯಾಗ್ರಹಣ ಸಂತೋಷ್‌ರಾಜೇಂದ್ರನ್, ಸಂಕಲನ ಕೀರ್ತಿರಾಜ್.ಡಿ ನಿರ್ವಹಿಸಿದ್ದಾರೆ. ಮಂಗಳೂರು ಕಡಲತೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.