ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಚುನಾವಣಾ ಆಯೋಗವು ʼಬ್ಯಾಟ್ʼ ಚಿಹ್ನೆಯನ್ನು ನೀಡಿದೆ. ಈ ಮೂಲಕ ಕುಮಾರ್ ಪುತ್ತಿಲ ಅವರಿಗೆ ಕ್ರಿಕೆಟ್ ಬ್ಯಾಟ್ ಚಿಹ್ನೆ ಖಚಿತವಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರವಾಗಿ ಕಣಕ್ಕೆ ಇಳಿದ ಬಳಿಕ ಅನೇಕರು ಇವರ ಮನವೊಲಿಸುವ ಪ್ರಯತ್ನವನ್ನ ಮಾಡಿದ್ರು. ನಾಮಪತ್ರ ಹಿಂದಕ್ಕೆ ಪಡೆಯುವಂತೆ ಓಲೈಕೆ ಮಾಡಿದ್ದರು, ಆದರೆ ಇದಾವುದಕ್ಕೂ ಮಣಿಯದ ಅರುಣ್ ಕುಮಾರ್ ಪುತ್ತಿಲ ಅವರು ದಿಟ್ಟ ಹೆಜ್ಜೆಯನ್ನ ಇಟ್ಟು ಸ್ಪರ್ಧೆಗೆ ಇಳಿದಿದ್ದಾರೆ. ಏ 24ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಅರುಣ್ ಪುತ್ತಿಲರವರು ನಾಮಪತ್ರ ಹಿಂಪಡೆಯದ ಹಿನ್ನಲೆಯಲ್ಲಿ ಅವರ ಸ್ಪರ್ಧೆ ಖಚಿತಗೊಂಡಿದೆ. ಇದೀಗ ಚುನಾವಣಾ ಆಯೋಗ ಅವರಿಗೆ ಕ್ರಿಕೆಟ್ ಬ್ಯಾಟ್ ಚಿಹ್ನೆ ನೀಡಿದೆ.
ಹಿಂದುತ್ವದ ಆಧಾರದಲ್ಲಿ ಕಣಕ್ಕೆ ಇಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರು ಎದುರಾಳಿ ಪಕ್ಷಕ್ಕೆ ತಮ್ಮ ಗೆಲುವಿನ ಮೂಲಕ ಬ್ಯಾಟ್ ಬೀಸ್ತಾರ ಅನ್ನೋದನ್ನ ಕಾದುನೋಡಬೇಕಾಗಿದೆ.