Friday, September 20, 2024
ಸುದ್ದಿ

ಕೇರಳದಲ್ಲಿ ಮತ್ತೆ ಮಹಾ ಮಳೆ ಸುರಿಯುವ ಸಾಧ್ಯತೆ : – ಕಹಳೆ ನ್ಯೂಸ್

ಕೊಚ್ಚಿ: ಭಾರಿ ಮಳೆ, ಪ್ರವಾಹದಿಂದ ಜರ್ಜರಿತಗೊಂಡಿರುವ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ  ಮತ್ತೆ ಮಹಾ ಮಳೆ ಸುರಿಯುವ ಮುನ್ಸೂಚನೆ ನೀಡಿದೆ .

ಕೇರಳದ ಪಟ್ಟಣಂತಿಟ್ಟ, ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ಸೆ.25ರಂದು ಮತ್ತು ಪಾಲಕ್ಕಾಡ್​, ಇಡುಕ್ಕಿ, ತ್ರಿಶೂರ್​ ಮತ್ತು ವೈಯನಾಡು ಜಿಲ್ಲೆಗಳಲ್ಲಿ ಸೆ. 26ರಂದು ಭಾರಿ ಪ್ರಮಾಣದ ಮಳೆ ಸುರಿಯುವ ಸಾಧ್ಯತೆಗಳಿವೆ. ಮಳೆ ಪ್ರಮಾಣ 64.4 ಮಿಲಿ ಮೀಟರ್​ಗಳಿಂದ 124.4 ಮಿಲಿಮೀಟರ್​ ಆಗಿರುವ ಸಾಧ್ಯತೆಗಳಿವೆ ಎಂದೂ ಹವಾಮಾನ ಇಲಾಖೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿದೆ. ಈ ಕುರಿತು ಟ್ವೀಟ್​ ಮಾಡಿ ಕೇರಳದ ನಾಗರಿಕರಿಗೆ ಮುನ್ಸೂಚನೆ ನೀಡಿದೆ ಸಿಎಂ ಕಚೇರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜಿಲ್ಲೆಗಳಲ್ಲಿ ಈಗಾಗಲೇ ಎಲ್ಲೋ(ಹಳದಿ) ಅಲರ್ಟ್​ ನೀಡಲಾಗಿದೆ. ಅದರಂತೆ, ಯಾವುದೇ ಸಂದರ್ಭವನ್ನು ನಿಭಾಯಿಸಲು ಸಜ್ಜಾಗಿರುವಂತೆಯೂ, ಸೂಚನೆ ಮೇರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚಿಸಿದೆ.

ಜಾಹೀರಾತು