Thursday, January 23, 2025
ಕ್ರೈಮ್ಸಿನಿಮಾಸುದ್ದಿ

ಸೆಕ್ಸ್ ರಾಕೆಟ್ ದಂಧೆಯಲ್ಲಿ ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು – ಕಹಳೆ ನ್ಯೂಸ್

ಮುಂಬೈ: ಸೆಕ್ಸ್ ರಾಕೆಟ್ ದಂಧೆಯಲ್ಲಿ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ನಟಿ ಹಾಗೂ ಕಾಸ್ಟಿಂಗ್ ನಿರ್ದೇಶಕಿ ಆರತಿ ಮಿತ್ತಲ್ ಕುರಿತು ಹಲವು ಆಸಕ್ತಿಕರ ಸಂಗತಿಗಳು ತನಿಖೆಯಿಂದ ಹೊರ ಬೀಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆರತಿ ಮಿತ್ತಲ್​ ಬಾಲಿವುಡ್​ ಅಂಗಳದಲ್ಲಿ ತುಂಬಾ ಪ್ರಭಾವ ಹೊಂದಿದ್ದಾಳೆ.

ಅಪ್ನಾಪಾನ್​ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಆರತಿ, ಆರ್​. ಮಾಧವನ್​ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ, ಇದೀಗ ವೇಶ್ಯಾವಾಟಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ.

ಬಾಲಿವುಡ್ ಪರಿಚಯವೇ ಲಾಭ

ಆರತಿ, ಬಾಲಿವುಡ್ ದಿಗ್ಗಜರ ರಹಸ್ಯ ಚಟುವಟಿಕೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಳು. ವಿರಾಮದ ಅಗತ್ಯವಿರುವ ಬಾಲಿವುಡ್​ ದಿಗ್ಗಜರು ಹಾಗೂ ಉದ್ಯಮಿಗಳಿಗೆ ಮಾಡೆಲ್​ಗಳನ್ನು ಪೂರೈಸಲು ಬಾಲಿವುಡ್​ ಅನ್ನು ಲಾಭದಾಯಕವಾಗಿ ಬಳಸಿಕೊಳ್ಳುತ್ತಿದ್ದಳು. ಈ ತಿಂಗಳ 11ರಂದೇ ಆರತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆದಾಗ್ಯೂ ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿತು. ಇದೀಗ ಈ ವಿಚಾರ ಬಾಲಿವುಡ್​ ಅಂಗಳದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.