ಮುಂಬೈ: ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ 91 ರೂಪಾಯಿಗಳಿಗೆ ತಲುಪಿದೆ. ಮುಂಬೈ ಮಹಾನಗರದಲ್ಲೇ ಲೀಟರ್ ಪೆಟ್ರೋಲ್ ಬೆಲೆ 90ರ ಗಟಿ ದಾಟಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ತೈಲ ಅತ್ಯಂತ ದುಬಾರಿ ಎನಿಸಿಕೊಂಡಿದೆ.
ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 90.08 ರೂ.ಗಳಿದ್ದರೆ, ಗ್ರಾಮಾಂತರ ಭಾಗದ ಕೆಲವು ಜಿಲ್ಲೆಗಳಲ್ಲಿ 90.91ರೂ.ಗಳಿವೆ. ಇದು ಮುಂದುವರಿದು 92 ರೂ.ಗಳಿಗೆ ತಲುಪುವ ಸಾಧ್ಯತೆಗಳೂ ನಿಚ್ಚಳವಾಗಿದೆ.
ಮಹಾರಾಷ್ಟ್ರದ ನಗರಗಳಾದ ನಂದೇಡ್ನಲ್ಲಿ 91.61 ರೂ., ಅಮರಾವತಿಯಲ್ಲಿ 91.31 ರೂ., ರತ್ನಗಿರಿಯಲ್ಲಿ 91.14 ರೂ, ಜಲಗೋನ್ನಲ್ಲಿ 91.01ರೂ.ಗಳಿಗೆ ಲೀಟರ್ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ಮಹಾರಾಷ್ಟ್ರ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಉದಯ್ ಲೋದ್ ತಿಳಿಸಿದ್ದಾರೆ.
ಸೋಮವಾರ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 5 ರಿಂದ 12 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 82.72 ರೂಗಳಿದ್ದರೆ, ಕೋಲ್ಕತಾದಲ್ಲಿ 84.54 ರೂ.ಗಳಿವೆ. ಚೆನ್ನೈನಲ್ಲಿ 85.99 ರೂಗಳಾಗಿದೆ.
ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 83.37 ರೂಪಾಯಿಗಳಾಗಿದ್ದು, 11 ಪೈಸೆ ಏರಿಕೆಯಾಗಿದೆ.