Friday, January 24, 2025
ಸುದ್ದಿ

ದುಬೈನಲ್ಲಿ ಜೂ.11ರಂದು ನಡೆಯಲಿರುವ ವಿಶ್ವ ಪಟ್ಲ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಯಕ್ಷಧ್ರುವ ಪಟ್ಲ ಪೌಂಡೇಶನ್ ಯು.ಎ.ಇ.ಘಟಕ ಜಂಟಿ ಸಂಯೋಜನೆಯ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2023 ಅಂಗವಾಗಿ ನಡೆಯಲಿರುವ “ದಶಾವತಾರ” ಯಕ್ಷಗಾನ ಪ್ರಸಂಗದ ಪ್ರವೇಶ ಪತ್ರ -ಅಮಂತ್ರಣಗಳ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಮ- ವೂದ್ ಮೆಹತಾ) ಜೂ.11ರಂದು ನಡೆಯಲಿರುವ ಬಹು ನಿರೀಕ್ಷಿತ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಶಾವತಾರ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ, ಪಟ್ಲ ಪೌಂಡೇಶನ್ ದುಬಾಯಿ ಘಟಕದ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಯವರು ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಪಟ್ಲ ಟ್ರಸ್ಟ್ ನ ಗೌರವಾಧ್ಯಕ್ಷರಾದ, ಸದಾಶಿವ ಶೆಟ್ಟಿ ಕನ್ಯಾನ ಮತ್ತು ಪ್ರಧಾನ ಸಂಚಾಲಕರಾದ ಹರೀಶ ಶೆಟ್ಟಿ ಐಕಳ, ಹಾಗೂ ಎಲ್ಲಾ ಪಟ್ಲ ಫೌಂಡೇಶನ್ ನ 40 ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.

ಕುಮಾರಿ ವೈಷ್ಣವಿ ಮನೋಹರ್ ಶೆಟ್ಟಿಗಾರ್ ಮತ್ತು ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಶ್ವ ಪಟ್ಲ ಸಂಭ್ರಮ ಮತ್ತು ದಶಾವತಾರ ಯಕ್ಷಗಾನ ಪ್ರಸಂಗಗಳ ರೂಪುರೇಷೆಗಳನ್ನು ಸಭೆಗೆ ವಿವರಿಸಿದರು. ಜೊತೆಗೆ ಯಕ್ಷಧ್ರುವ ಪಟ್ಲ ಘಟಕದ ಸ್ಥಾಪಕರಾದಸತೀಶ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ನಡೆಯಲಿರುವ ದಶಾವತಾರ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ವಿಶಾರದ ರವಿಚಂದ್ರ ಕನ್ನಡಿಕಟ್ಟೆ, ಪ್ರಖ್ಯಾತ ಚೆಂಡೆ-ಮದ್ದಳೆ ವಾದಕರಾದ ಪದ್ಮನಾಭ ಉಪಾಧ್ಯಾಯ ಮತ್ತು ಚೈತನ್ಯಕೃಷ್ಣ ಪದ್ಯಾಣ, ಹಾಗೂ ವರ್ಣವಸ್ತ್ರಾಲಂಕಾರ ತಜ್ಞರಾದ ಗಂಗಾಧರ ಶೆಟ್ಟಿಗಾರ್, ಕಿನ್ನಿಗೋಳಿ, ನಿತಿನ್ ಕುಂಪಲ ಮತ್ತು ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದರು.

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳೂ ಪ್ರಸಂಗ ನಿರ್ದೇಶಕರೂ ಆದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ದಶಾವತಾರದ ಕಥಾಹಂದರ- ಪ್ರದರ್ಶನ ವಿಶೇಷತೆಗಳ ಜೊತೆಗೆ ದಶಾವತಾರ ಪ್ರಸಂಗಗಳಿಗೆ ಆಯ್ದುಕೊಳ್ಳುವ ಮೂಲ ಪ್ರಸಂಗ ಕವಿಗಳ ವಿವರವನ್ನು ಸಭೆಯ ಮುಂಡಿಟ್ಟರು.

ಹಾಗೆಯೇ ವೇದಿಕೆಯಲ್ಲಿ ಉಪಸ್ಥಿತರಿದ್ದ ದುಬಾಯಿಯ ಪ್ರಮುಖ ಗಣ್ಯರಾದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಯುಎಇ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಪುತ್ತಿಗೆ ವಾಸುದೇವ ಭಟ್, ಭೀಮ ಜುವೆಲ್ಲರಿ ದುಬೈ ಆಡಳಿತ ನಿರ್ದೇಶಕ ನಾಗರಾಜ ರಾವ್, ಕಲಾತ್ಮಕ ನಿರ್ದೇಶಕ ಬಿ. ಕೆ ಗಣೇಶ್ ರೈ, ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ಪದ್ಮಶಾಲಿ ಸಮುದಾಯ ದುಬೈನ ವರದರಾಜ್ ಶೆಟ್ಟಿಗಾರ್, ಮೊಗವೀರ ಸಮುದಾಯ ದುಬೈ ಸಂಘಟಕ ಬಾಲಕೃಷ್ಣ ಸಾಲಿಯಾನ್, ಲೇಖಕರು,ಬಿಲ್ಲವಾಸ್ ಅಬುಧಾಬಿಯ ಮನೋಹರ್ ತೋನ್ಸೆ, ನಿಹಾಲ್ ರೆಸ್ಟೋರೆಂಟ್ ಅಬುಧಾಬಿಯ ಸುಂದರ್ ಶೆಟ್ಟಿ, ಕನ್ನಡ ಪಾಠ ಶಾಲೆಯ ಶಶಿಧರ್ ನಾಗರಾಜಪ್ಪ, ತುಳು ಚಿತ್ರ ನಿರ್ಮಾಪಕರಾದ ಆತ್ಮನಂದ ರೈ, ಪ್ರಭಾಕರ ಸುವರ್ಣ ಕರ್ನಿರೆ ಅಧ್ಯಕ್ಷರು, ಬಿಲ್ಲವ ಫ್ಯಾಮಿಲಿ ದುಬೈ, ಉದ್ಯಮಿ, ಕಲಾಪೋಷಕರಾದ ರಮಾನಂದ ಶೆಟ್ಟಿ ಮೊದಲಾದವರಿದ್ದರು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲಾ ಗಣ್ಯರು ಒಂದಾಗಿ, ಕಾರ್ಯಕ್ರಮದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿ, ಸಮಸ್ತ ಯುಎಇಯಲ್ಲಿ ಯಕ್ಷಗಾನದ ಕಂಪನ್ನು ಮನೆ ಮನೆಗೂ ಪಸರಿಸಿ, ಕಿರಯರಿಂದ ಹಿರಿಯರವರೆಗೆ ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಅರ್ವಾಚೀನ ಪ್ರಬುದ್ಧ ಯಕ್ಷಗಾನ ಕಲೆಯನ್ನು ಪಸರಿಸುತ್ತಿರುವ ಯಕ್ಷಗಾನ ಅಭ್ಯಾಸ ಕೇಂದ್ರದ ಈ ಕಾರ್ಯಕ್ರಮವನ್ನು ಬೆಂಬಲಿಸಬೇಕಾದ ಅಗತ್ಯವನ್ನು ವಿವರಿಸಿ, ನಮ್ಮ ಜೊತೆಗೆ ಅಖಂಡ ಯುಎಇಯ ಸರ್ವ ಕಲಾಭಿಮಾನಿಗಳ, ಕೌಟುಂಬಿಕ-ಸಾಂಸ್ಕೃತಿಕ ಸಂಘಟನೆಗಳು ಪೂರ್ಣ ಪ್ರಮಾಣದಿಂದ ಬೆಂಬಲಿಸಬೇಕೆಂದು ಕರೆ ನೀಡಿದರು.

ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯರಾದ ರಾಜೇಶ್ ಕುತ್ತಾರು, ಕಾರ್ಯಕ್ರಮ ನಿರ್ವಹಿಸಿದರೆ, ಗಿರೀಶ್ ನಾರಾಯಣರು ಧನ್ಯವಾದ ಸಮರ್ಪಣೆ ಮಾಡಿದರು.