Saturday, November 23, 2024
ಸುದ್ದಿ

ಪುತ್ತೂರಿನಲ್ಲಿ ಸಾಪ್ತಾಹಿಕ ಮಕ್ಕಳ ಬೇಸಿಗೆ ಶಿಬಿರ “ಕಲರವ” 2023– ಕಹಳೆ ನ್ಯೂಸ್

ಪುತ್ತೂರು : ಮೇಘ ಕಲಾ ಆರ್ಟ್ಸ್ ಮತ್ತು ಡ್ಯಾನ್ಸ್ ಸ್ಟುಡಿಯೋ ಮತ್ತು ಮುರಳಿ ಬ್ರದರ್ಸ್ ಕ್ರೂ ವತಿಯಿಂದ ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರಿನಲ್ಲಿ ಸಾಪ್ತಾಹಿಕ ಮಕ್ಕಳ ಬೇಸಿಗೆ ಶಿಬಿರ ” ಕಲರವ 2023ನ್ನು ” ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸಂಚಾಲಕ, ಯಕ್ಷ ಬೊಳ್ಳಿ ದಿನೇಶ್ ರೈ ಕಡಬ ಉದ್ಘಾಟಿಸಿದರು.
ಬೇಸಿಗೆ ಶಿಬಿರ ಮಕ್ಕಳಲ್ಲಿ ನಾಯಕತ್ವ ಬೆಳೆಸುವುದರ ಜೊತೆಗೆ, ಸೃಜನಾತ್ಮಕ ಮನೋಭಾವನೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು. ಅಧ್ಯಕ್ಷೆತೆ ವಹಿಸಿದ ಲಿಟ್ಲ್ ಫ್ಲವರ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ.ವೆನಿಶಾ ಬಿ ಎಸ್ ಮಾತನಾಡಿ ಹುಟ್ಟುವಾಗಲೇ ಅಪಾರ ಪ್ರತಿಭೆಗಳನ್ನು ಹೊತ್ತು ತರುವ ಮಕ್ಕಳು ಅದನ್ನು ಅರಿತು ಅದಕ್ಕೆ ಪೂರಕವಾದ ಇಂತಹ ಬೇಸಿಗೆ ಶಿಬಿರ ತೊಡಗಿಸಿಕೊಂಡು ನಿಮ್ಮಲ್ಲಿನ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ಹರೀಶ್ ಪಿ ಪಡುಮಲೆ, ಬಾಲ ಕಲಾವಿದೆ ಅದಿತಿ ಪ್ರಶಾಂತ್, ಲಿಟ್ಲ್ ಫ್ಲವರ್ ಶಾಲಾ ರಕ್ಷಕ ಶಿಕ್ಷಕ ಸಂಘದ ನಿಕಟ ಪೂರ್ವ ಉಪಾಧ್ಯಕ್ಷರಾದ ಶ್ರೀಯುತ ರಮೇಶ್ ಕೆ ವಿ, ಲಿಟ್ಲ್ ಫ್ಲವರ್ ಶಾಲೆಯ ಹಿರಿಯ ಶಿಕ್ಷಕಿ ಭಗಿನಿ ವಿನೀತಾ ಪಿರೇರಾ,ಕೋಸ್ಟಲ್ ಹೋಮ್ ದರ್ಬೆಯ ಮಾಲಕರಾದ ಶ್ರೀಯುತ ಸಂದೇಶ್ ರೈ ಉಪಸ್ಥಿತರಿದ್ದರು.
ಮೇಘ ಆರ್ಟ್ಸ್ ಮತ್ತು ಡ್ಯಾನ್ಸ್ ಸ್ಟುಡಿಯೋದ ಮಾಲಕರಾದ ರಾಜ್ಯಪ್ರಶಸ್ತಿ ವಿಜೇತೆ ಶ್ರೀಮತಿ ಶಾರದಾ ದಾಮೋದರ್ ಸ್ವಾಗತಿಸಿ,ಮುರಳಿ ಬ್ರದರ್ಸ್ ಕ್ರೂ ಮಾಲಕರಾದ ಶ್ರೀಯುತ ಮುರಳಿ ವಂದಿಸಿ.ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಮುರಳಿ ಬ್ರದರ್ಸ್ ಕ್ರೂ ಸದಸ್ಯರಾದ ಜೀವನ್, ರಕ್ಷಾ, ಶಿವ ಮುರಳಿ, ತರ್ಷಿನಿ, ಪ್ರಜ್ವಲ್, ಅರುಣ್ ಮುರಳಿ, ಶಾಯ ಹರ್ವಿನ್, ಪೂಜಾ, ಮತ್ತು ಹರ್ಷಿತ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕಲರವ ಬೇಸಿಗೆ ಶಿಬಿರ ಸೇರಿಕೊಳ್ಳಲು ಇನ್ನು ೨ ದಿನದ ಅವಕಾಶವಿದೆ. ಮಕ್ಕಳು ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು