Sunday, January 26, 2025
ಸುದ್ದಿ

ಎ. 27-28ರಂದು ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಲಿರುವ ವರ್ಷಾವಧಿ ನೇಮ ನಡಾವಳಿ – ಕಹಳೆ ನ್ಯೂಸ್

ಪುತ್ತೂರು: ಎ. 27-28ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ನೇಮ ನಡಾವಳಿ ನಡೆಯಲಿದೆ.
ಈ ಪ್ರಯುಕ್ತ ಎ.27ರಂದು ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ನಡೆದು, ಬಳಿಕ ಸಂಜೆ ರಂಗಪೂಜೆ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದು, ಬಳಿಕ ದೈವಗಳಿಗೆ ತಂಬಿಲ ನಡೆದು, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎ.28ರ ಬೆಳಿಗ್ಗೆ ಶ್ರೀ ದಂಡನಾಯಕ ದೈವದ ವಲಸರಿ ನೇಮ, ಬಳಿಕ ಉಳ್ಳಾಲ್ತಿ ನೇಮ ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ಶ್ರೀ ಕಾಳರಾಹು ಹಾಗು ಮಲರಾಯ ದೈವಗಳ ನೇಮೋತ್ಸವ ನಡೆಯಲಿದೆ.
ಈ ದೈವೀಕ ಕಾರ್ಯದಲ್ಲಿ ತಾವೆಲ್ಲರೂ ಬಂದು ಭಾಗವಹಿಸಿ, ದೈವದ ಕೃಪೆಗೆ ಪಾತ್ರರಾಗಬೇಕೆಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನ ಭಕ್ತಾದಿಗಳು ಮನವಿ ಮಾಡಿಕೊಂಡಿದ್ದಾರೆ.