Recent Posts

Friday, November 22, 2024
ಸುದ್ದಿ

“ಬಂಟ್ವಾಳದ ಜನ ಕಳೆದ ಐದು ವರ್ಷಗಳಿಂದ ನೆಮ್ಮದಿಯ ಜೀವನ ಮಾಡಿದ್ದಾರೆ ಎಂಬುದೇ ಅತ್ಯಂತ ಖುಷಿ ತಂದಿರುವ ವಿಚಾರ” : ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ – * -ಕಹಳೆ ನ್ಯೂಸ್*

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳದಲ್ಲಿ ಜನ ಕಳೆದ ಐದು ವರ್ಷಗಳಿಂದ ನೆಮ್ಮದಿಯ ಜೀವನ ಮಾಡಿದ್ದಾರೆ ಎಂಬುದೇ ಅತ್ಯಂತ ಖುಷಿ ತಂದಿರುವ ವಿಚಾರ ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಹೇಳಿದರು.ಅವರು ಪಕ್ಷದ ಕಚೇರಿಯಲ್ಲಿ ರಿಕ್ಷಾ ಚಾಲಕರ ಜೊತೆ ಸಭೆ ನಡೆಸಿ ಮತಯಾಚನೆ ನಡೆಸಿದರು. ಅಭಿವೃದ್ಧಿ ನಿರಂತರ ಪ್ರಕ್ರಿಯೆಯಾಗಿದ್ದ, ಇದರ ಜೊತೆಗೆ ಗೊಂದಲಮಯವಾಗಿದ್ದ ಬಂಟ್ವಾಳವನ್ನು ಶಾಂತಿಯ ಬಂಟ್ವಾಳವಾಗಿ ನಿರ್ಮಾಣ ಮಾಡಲು ಕಾರಣೀಕರ್ತರಾದ ಕ್ಷೇತ್ರದ ಜನ, ಅಧಿಕಾರಿ ವರ್ಗದವರ ಜೊತೆ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.
ದಿನದ 24ಗಂಟೆ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ರಿಕ್ಷಾ ಚಾಲಕರ ಪ್ರತಿಯೊಂದು ಸಮಸ್ಯೆಗಳಿಗೆ ನನಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು. ಅನೇಕ ಜನಪರವಾದ ಅಭಿವೃದ್ಧಿ ಯೋಜನೆಗಳ ಕನಸು ಕಂಡಿದ್ದು,ಎಲ್ಲವನ್ನೂ ಕ್ಷೇತ್ರಕ್ಕೆ ಒದಗಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಪರಿವಾರ ಸಂಘಟನೆಯ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವಲ್ಲಿ ಪ್ರಯತ್ನ ಮಾಡಬೇಕಾಗಿದೆ.
2013 ರಿಂದ 2018ರವರೆಗೆ ಮತ್ತು ಅದಕ್ಕೂ ಹಿಂದಿನ ಕಾಲಘಟ್ಟದಲ್ಲಿ ನಡೆದ ಕಹಿಘಟನೆಗಳನ್ನು ರಿಕ್ಷಾ ಚಾಲಕರು ನೆನಪು ಮಾಡಬೇಕಾದ ಅನಿವಾರ್ಯತೆ ಇದೆ.ದೊಂಬಿ,ಗಲಾಟೆ ದೌರ್ಜನ್ಯ, ಹೋರಾಟ,ಪ್ರತಿಭಟನೆಗಳಿಂದ ನಲುಗಿ ಹೋಗಿದ್ದ ಬಂಟ್ವಾಳದಲ್ಲಿ ಮತ್ತೊಮ್ಮೆ ಶಾಂತಿ ನೆಲೆಯಾಗಬೇಕಾ

ದರೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಇದರ ಜೊತೆಗೆ ರಿಕ್ಷಾ ಚಾಲಕರಿಗೆ ಮುಖ್ಯವಾಗಿರುವ ಹಳ್ಳಿಹಳ್ಳಿಗಳ ರಸ್ತೆಗಳ ಕಾಂಕ್ರೀಟ್ ಕರಣ ನಡೆದಿದೆ,ಇದರ ಜೊತೆಗೆ ಬೇಡಿಕೆಗೆ ಅನುಗುವಾಗಿ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುವ ರಿಕ್ಷಾ ಸ್ಟ್ಯಾಂಡ್ ಳ ನಿರ್ಮಾಣ ನಡೆದಿದೆ.ಇದರ ಜೊತೆಗೆ ರಿಕ್ಷಾ ಚಾಲಕರ ಪ್ರತಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳ ಜೊತೆ ಬಂಟ್ವಾಳದ ಸಮಗ್ರವಾದ ಅಭಿವೃದ್ಧಿಗಾಗಿ ರಾಜೇಶ್ ನಾಯ್ಕ್ ಅವರಿಗೆ ಮತ ನೀಡಿ ಎಂದರು.
ಬAಟ್ವಾಳ ಪ್ರವಾಸಿ ರವಿಶಂಕರ್ ಮಿಜಾರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಹೆಸರು ರಾರಾಜಿಸಬೇಕಾದರೆ ರಿಕ್ಷಾ ಚಾಲಕರ ಮತದ ಜೊತೆಗೆ ಅವರ ಕುಟುಂಬದ ಮತಗಳನ್ನು ಹಾಕುವ ಮೂಲಕ ಬಂಟ್ವಾಳದಲ್ಲಿ ಕಮಲವನ್ನು ಅರಳಿಸಬೇಕು ಎಂದು ಅವರು ತಿಳಿಸಿದರು. ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸಿ, ರಾಜ್ಯದಲ್ಲಿ ಬಿಜೆಪಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತಕ್ಕೆ ಸಾಥ್ ನೀಡಿ ಎಂದು ಮನವಿ ಮಾಡಿದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಮಾತನಾಡಿ 2013ರ ಚುನಾವಣಾ ಬಹಳ ಅರ್ಥಪೂರ್ಣ ಮತ್ತು ನಿರ್ಣಾಯಕ ಚುನಾವಣೆ ಇದಾಗಿದ್ದು, ರಾಷ್ಟ್ರೀಯತೆಯ ಜೊತೆಗೆ ಅಭಿವೃದ್ಧಿಪರವಾದ ಯೋಜನೆಗಳನ್ನು ರೂಪಿಸಲು ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸಬೇಕು, ಇದಕ್ಕಾಗಿ ರಿಕ್ಷಾ ಚಾಲಕರು ನಮ್ಮ ಜೊತೆಯಾಗಿ ಎಂದು ಮನವಿ ಮಾಡಿದರು.

ಈ ಸಂದರ್ಭ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕಾರ್ಕಳ,ಬಿಎಂ.ಎಸ್.ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚ ವಿಶ್ವನಾಥ ಚೆಂಡ್ತಿಮಾರ್, ಪುರಸಭಾ ವ್ಯಾಪ್ತಿಯ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಣೇಶ್ ದಾಸ್ ಪಲ್ಲಮಜಲು, ಕೇರಳದ ಪಾಲಕ್ಕಾಡ್ ಜಿಲ್ಲಾಧ್ಯಕ್ಷ ಹರಿದಾಸ್ ಮತ್ತಿತರರು ಉಪಸ್ಥಿತರಿದ್ದರು.