Recent Posts

Sunday, January 19, 2025
ಸುದ್ದಿ

ಪ್ರಜ್ಞೆ ತಪ್ಪಿಸಿ ಪ್ರಯಾಣಿಕನೊಬ್ಬನ  ಚಿನ್ನ, ನಗದು ದರೋಡೆ – ಕಹಳೆ ನ್ಯೂಸ್

ಕಾಸರಗೋಡು:  ಪ್ರಯಾಣಿಕನೋರ್ವನಿಗೆ  ಪ್ರಜ್ಞೆ ತಪ್ಪಿಸಿ   ಚಿನ್ನ- ನಗದು ದರೋಡೆ ಗೈದ ಘಟನೆ  ರೈಲಿನಲ್ಲಿ ನಡೆದಿದೆ.  ಮುಂಬೈ ಯಿಂದ  ಊರಿಗೆ ರೈಲಿನಲ್ಲಿ ಬರುತ್ತಿದ್ದ ಮರಳುತ್ತಿದ್ದ ಪಾಲಕ್ಕಾಡ್ ನ ಅರುಣ್ ಎಂಬವರು ದರೋಡೆಗೊಳಗಾದವರು.

ಉದ್ಯೋಗ ಹುಡುಕಿಕೊಂಡು ಕೆಲ ದಿನಗಳ ಹಿಂದೆ ಅರುಣ್ ಮುಂಬೈ ಗೆ ತೆರಳಿದ್ದು , ಕೆಲಸ ಸರಿಯಾದಾಗ ಹಿನ್ನಲೆಯಲ್ಲಿ  ಹಾಪಾ  ಎಕ್ಸ್  ಪ್ರೆಸ್  ರೈಲಿನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೈಲಿನಲ್ಲಿ  ಹಿಂದಿ ಮಾತನಾಡುವ  ಪ್ರಯಾಣಿಕನೋರ್ವ ಪರಿಚಯವಾಗಿದ್ದು, ದಾರಿ ಮಧ್ಯೆ ಈತ  ಬಿಸ್ಕೆಟ್ ನೀಡಿದ್ದು , ಅದನ್ನು ಸೇವಿಸಿದ  ಬಳಿಕ ಪ್ರಜ್ಞೆ ತಪ್ಪಿದ್ದು , ಇಂದು ಬೆಳಿಗ್ಗೆ ಕಾಸರಗೋಡಿಗೆ ತಲುಪಿದಾಗ ಪ್ರಜ್ಞೆ ಮರಳಿತ್ತು ಎಂದು ಅರುಣ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಹದಲ್ಲಿದ್ದ ಒಂದೂವರೆ ಪವನ್ ಚಿನ್ನಾಭರಣ , ಎರಡು ಸಾವಿರ ರೂ . ನಗದು , ಎಟಿಎಂ ಕಾರ್ಡ್  ಮೊದಲಾದವು ಒಳಗೊಂಡ  ಪರ್ಸ್ ನ್ನು  ದರೋಡೆ ಮಾಡಲಾಗಿದೆ.

ಕಾಸರಗೋಡು ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಅರುಣ್ ಮಾಹಿತಿ  ನೀಡಿದ್ದು , ಬಳಿಕ ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.