ಪುತ್ತೂರಿನ ಲೋಕಲ್ ಪತ್ರಿಕೆ ವಿರುದ್ದ ಸುಳ್ಳುಸುದ್ದಿ ಪ್ರಕಟಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ ಹಿಂದೂ ನಾಯಕ ಮಂಜುನಾಥ ಉಡುಪ – ಕಹಳೆ ನ್ಯೂಸ್
ಸೆ.9ರಂದು ವಿಟ್ಲದ ಕಡಂಬು ಎಂಬಲ್ಲಿ ಜನ್ಮಾಷ್ಠಮಿಯ ಪ್ರಯುಕ್ತ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾಗಿರುವ ಮಂಜುನಾಥ ಉಡುಪ ಅವರು ಸಭೆಯಲ್ಲಿ ಧಾರ್ಮಿಕ ಭಾಷಣವನ್ನು ನಡೆಸಿದ್ದರು.
ಆ ಭಾಷಣದ ಆಧಾರದಲ್ಲಿ ಕೋಮು ಸ್ವಾರಸ್ಯ ಕೆಡಿಸುವ ರೀತಿಯಲ್ಲಿ ಮಾತನಾಡಿದ್ದರು ಎಂಬ ರೀತಿಯಲ್ಲಿ ಒತ್ತಡಪೂರ್ವಕ ಕೇಸನ್ನು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಸೆ.19ರಂದು ವಕೀಲರ ಮುಖಾಂತರ ಕೋರ್ಟ್‌ಗೆ ಹಾಜರಾದ ಮಂಜುನಾಥ ಉಡುಪರು ಮಧ್ಯಂತರ ಜಾಮೀನು ಪಡೆದುಕೊಂಡರು. ಬಳಿಕ ಸೆ.20ರಂದು ಸಂಜೆ ವಿಟ್ಲ ಪೊಲೀಸರು ಅವರನ್ನು ಒತ್ತಡಪೂರ್ವಕವಾಗಿ ವಿಟ್ಲ ಠಾಣೆಗೆ ಕರೆಸಿ, ಸಹಿ ಪಡೆದು ಬಂಧನವಾಗಿದೆಯೆಂಬ ರೆಕಾರ್ಡ್ ಮಾಡಿರುತ್ತಾರೆ.
ಇದನ್ನು ಬಳಸಿದ ಮಾಧ್ಯಮಗಳು, ಹಿಂದೂ ನೇತಾರನನ್ನು ಯಾವ ರೀತಿಯಿಂದಾದರೂ ಬಗ್ಗು ಬಡಿಯುವ ದುರುದ್ದೇಶದಿಂದ; ಮಂಜುನಾಥ ಉಡುಪರ ಕೈಯಲ್ಲಿ ಸ್ಲೇಟ್ ಹಿಡಿದ ಎಡಿಟ್ ಮಾಡಿದ ಚಿತ್ರದೊಂದಿಗೆ ಬಂಧನವಾದರು ಹಾಗೂ ತಲೆಮರೆಸಿಕೊಂಡಿದ್ದರು ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿರುತ್ತಾರೆ. ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಆ ಭಾಗದಲ್ಲಿ ಪ್ರಚಾರಕ್ಕೆ ತೆರಳಿರುವ ಇವರ ಮೇಲೆ ಈ ಹಿಂದೆಯೇ ಆ ಭಾಗದ ಕೆಲವರು ಕಣ್ಣಿಟ್ಟಿದ್ದರು.
ಈ ರೀತಿಯ ಅಪಪ್ರಚಾರ ಮಾಡಿರುವ ವಾರ್ತಾಭಾರತಿ, ಸುದ್ದಿ ಬಿಡುಗಡೆ ಸೇರಿದಂತೆ ಹಲವಾರು ಪತ್ರಿಕೆಗಳು ಹಾಗೂ ಆನ್‌ಲೈನ್ ಮಾಧ್ಯಮಗಳ ವಿರುದ್ಧ ಮಂಜುನಾಥ ಉಡುಪ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದೇ ರೀತಿ ಜಾಮೀನು ಸಿಕ್ಕಿದ ನಂತರವೂ ಬಂಧನ ಪ್ರಕ್ರಿಯೆ ನಡೆಸಿದ ಇಲಾಖೆಯ ಮೇಲೆಯೂ ಮಾನ್ಯ ಬಂಟ್ವಾಳ ನ್ಯಾಯಾಲಯದಲ್ಲಿ ವಕೀಲರ ಮುಖಾಂತರ ಕೇಸು ದಾಖಲಿಸಿರುತ್ತಾರೆ.