Sunday, January 19, 2025
ಸುದ್ದಿ

ಲಕ್ಷಾಂತರ ರೂ ಮೌಲ್ಯದ ಗಾಂಜಾ ಪತ್ತೆ ; ಆರೋಪಿಯ ಬಂಧನ : ಕಹಳೆ ನ್ಯೂಸ್

ಬಂಟ್ವಾಳ: ಲಕ್ಷಾಂತರ ರೂ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ ಘಟನೆ ಎ. 26ರಂದು ಬುಧವಾರ ಸಂಜೆ 5.30 ರ ವೇಳೆ ತುಂಬೆ ಎಂಬಲ್ಲಿ ನಡೆದಿದೆ.
ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯ ಸಂಜಿಯಘಟ್ ರಾಜ್ ಘಾಟ್ ಗ್ರಾರೈಲ್ ನಿವಾಸಿ ಸುನಿಲ್ ಮೊಹತ್ತೊ ಬಂಧಿತ ಆರೋಪಿ.
ಆರೋಪಿಯಿಂದ ಸುಮಾರು 1.50. ಲಕ್ಷ ಮೌಲ್ಯದ 1.5ಕೆ.ಜಿ.ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಸುನಿಲ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಎಂಬಲ್ಲಿ ಗಾಂಜಾ ಸಹಿತ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಗ್ರಾಮಾಂತರ ಎಸ್.ಐ.ಉದಯರವಿ ಮತ್ತು ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.