
ವಿಧಾನಸಭಾ ಚುನಾವಣೆ ನಿಮಿತ್ತ ಮಹಾ ಅಭಿಯಾನದ ಅಂಗವಾಗಿ ಇಂದು 33ನೇ ಕದ್ರಿ ದಕ್ಷಿಣ ವಾರ್ಡಿನ ಮನೆಗಳನ್ನು ಸಂಪರ್ಕಿಸಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಅವರ ಪರವಾಗಿ ಮತಯಾಚನೆ ನಡೆಸಿ ಕರಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ ಮಾಜಿ ಸದಸ್ಯರಾದ ಶ್ರೀ ಮೊನಪ್ಪ ಭಂಡಾರಿ , ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ,ಚುನಾವಣಾ ಕ್ಷೇತ್ರ ಸಂಚಾಲಕರಾದ ಶ್ರೀ ನಿತಿನ್ ಕುಮಾರ್,ಮಂಡಲ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಂಡೆಟ್ಟು, ಸ್ಥಳೀಯ ಮ ನ ಪಾ ಸದಸ್ಯರಾದ ಶ್ರೀ ಮನೋಹರ ಶೆಟ್ಟಿ ,ಪಕ್ಷದ ಪ್ರಮುಖರು ,ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
