Friday, November 22, 2024
ಸುದ್ದಿ

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯುತ್ತ) ಪುತ್ತೂರು ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವೆನ್ನುವುದು ಸತ್ಯ, ಸತ್ಯಕ್ಕೆ ಹೇಗೆ ಸಾವಿಲ್ಲವೋ ಹಾಗೆಯೇ ಧರ್ಮಕ್ಕೆ ಸಾವಿಲ್ಲ. ಧರ್ಮಕ್ಕೆ ಅವಿನಾಶಿ ಗುಣವಿದೆ. ಪೂರ್ವಜರಿಂದ ಬಂದಂತಹ ಆಚಾರ ವಿಚಾರಗಳನ್ನು ಒಪ್ಪಿಕೊಳ್ಳಬೇಕಾದರೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಧರ್ಮವು ಸಮರವನ್ನು ಸಾರುವ ಧರ್ಮವಲ್ಲ ಅದು ಶಾಂತಿಯನ್ನು ಸಾರುವ ಧರ್ಮ ಅದೇ ಹಿಂದೂ ಧರ್ಮ. ಶಾಂತಿ, ಸಹನೆ, ತ್ಯಾಗ ಇದೆಲ್ಲಾ ಇರುವುದೇ ಹಿಂದೂ ಧರ್ಮದಲ್ಲಿ. ಸಂಸ್ಕೃತಿಯ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮ ಸೃಷಿಗೊಂಡಿದೆ. ಹಿಂದುತ್ವದಿಂದ ಮಾತ್ರ ಭಾರತ ಭಾರತವಾಗಿ ಉಳಿಯಲು ಸಾಧ್ಯ. ಆಚಾರ ವಿಚಾರಗಳಿಗೆ ವೈಜ್ಞಾನಿಕತೆ ಇದೆ ಎಂದು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯುತ್ತ) ಪುತ್ತೂರು ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶಕ್ಕಾಗಿ ದುಡಿಯಬೇಕು ಭೂಮಿಯನ್ನು ತಾಯಿಯಂತೆ ನೋಡಬೇಕು. ಪುಸ್ತಕಗಳನ್ನು ಓದಬೇಕು ಅಥವಾ ಹೇಳಿದ್ದನ್ನು ತಿಳಿದುಕೊಳ್ಳಬೇಕು ಆಗಾದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದರು.

ದೇಶಭಕ್ತಿ, ಸನಾತನ ಧರ್ಮದ ಬಗ್ಗೆ ಕಾಳಜಿ ಇರಬೇಕು.ಧರ್ಮ ಎನ್ನುವ ವಿಷಯಕ್ಕೆ ಪಠ್ಯಕ್ರಮ ಹಾಗೂ ಶಿಕ್ಷಕರೆಂಬುವವರು ಇಲ್ಲ ಇದಕ್ಕೆಲ್ಲ ನಮ್ಮ ಆಸಕ್ತಿಯೇ ಮುಖ್ಯ ಬಹಳಷ್ಟು ಅಧ್ಯಯನ ಮಾಡಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲುರಾಯ ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಎಂ. ಶ್ರೀನಿವಾಸ ಸಾಮಂತ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಡಾ.ರವಿಕಲಾ ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎಂ ಸ್ವಾಗತಿಸಿ, ರಕ್ಷಿತಾ ಎಸ್ ವಂದಿಸಿ.ಚೈತನ್ಯ ಲಕ್ಷ್ಮೀ ನಿರೂಪಿಸಿದರು.