Thursday, January 23, 2025
ಉಡುಪಿರಾಜಕೀಯರಾಜ್ಯಸುದ್ದಿ

‘ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗೆ ಹರಸಿ’- ಮತದಾರರಿಗೆ ಸುನೀಲ್ ಕುಮಾರ್ ವಿನಂತಿ – ಕಹಳೆ ನ್ಯೂಸ್

ಕಾರ್ಕಳ, ಏ 27 : ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನನಗೆ ನೀಡಿ, ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸಿ” ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸುನೀಲ್ ಕುಮಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳ ವಿಧಾನಸಭಾ ಕ್ಷೇತ್ರದ ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ ಮಾತನಾಡಿದ ಅವರು “ಮಕ್ಕಳಿಗೆ ಸೈಕಲ್ ನೀಡುವ ಯೋಜನೆ ಆರಂಭವಾಗಿದ್ದೇ ಬಿಜೆಪಿ ಸರಕಾರದಲ್ಲಿ. ಉಜ್ವಲ ಯೋಜನೆ ಮನೆ ಮನೆ ತಲುಪಿದ್ದೇ ಬಿಜೆಪಿಯ ಕಾರಣದಿಂದ. ಇಂದು ಮಹಿಳೆಯರ ಸಶಕ್ತೀಕರಣ ಮಾಡುವ ಪ್ರಯತ್ನ ಬಿಜೆಪಿ ಸರಕಾರದ ಕಾಲದಲ್ಲಿ ಆಗಿದ್ದು. ಕಾಂಗ್ರೆಸ್ ನವರು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ, ಅಪಪ್ರಚಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ” ಎಂದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಸುನಿಲ್ ಕುಮಾರ್ “ಸುನೀಲ್ ಕುಮಾರ್ ಮತ್ತು ಬಿಜೆಪಿ ನಿಮ್ಮೊಂದಿಗೆ ನಿರಂತರವಾಗಿ ಇದ್ದವರೇ.ನಮ್ಮ ಗ್ರಾಮ ಪಂಚಾಯಿತಿ ಸದಸ್ಯರು ನಿಮ್ಮೊಂದಿಗೆ ಇದ್ದವರೇ.ಮುಂದೆ ನೀವು ಯಾವುದೇ ಸಮಸ್ಯೆ ಮತ್ತು ಬೇಡಿಕೆ ಇದ್ದರು ಅದನ್ನು ಇಡೇರಿಸುವ ಪ್ರಯತ್ನ ನಾವು ಮಾಡುತ್ತೇವೆ. ದಯಮಾಡಿ ಇನ್ನೊಂದು ಅವಕಾಶ ಕೊಟ್ಟು ಬಿಜೆಪಿಯನ್ನು ಗೆಲ್ಲಿಸಬೇಕು”ಎಂದು ವಿನಂತಿಸಿದರು.