Thursday, January 23, 2025
ಸುದ್ದಿ

ಮಂಗಳೂರು ವ್ಯಾಪ್ತಿಯಲ್ಲಿ ಮತಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಶ್ರೀ ಡಿ. ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅತ್ತಾವರ, ಜಪ್ಪಿನಮೊಗರು, ನಾಗುರಿ, ಎಕ್ಕೂರು ಪರಿಸರಕ್ಕೆ ತೆರಳಿ ಬಿಜೆಪಿ ಅಭ್ಯರ್ಥಿ ಶ್ರೀ ಡಿ. ವೇದವ್ಯಾಸ್ ಕಾಮತ್ ಅವರು ಮತಯಾಚಿಸಿದರು.

“ಬಿಜೆಪಿಯ ಗೆಲುವಿನ ಓಟಕ್ಕೆ ಮತದಾರ ಪ್ರಭುಗಳು ನೀಡುತ್ತಿರುವ ಆಶೀರ್ವಾದವೇ ದೊಡ್ಡ ಶಕ್ತಿ. ಜನರ ಮನಸ್ಸು ಈಗಾಗಲೇ ಬಿಜೆಪಿ ಪರ ಇರುವುದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮನೆ ಮನೆಯ ಭೇಟಿ ಸಂದರ್ಭದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಪ್ರತೀ ಮನೆಯವರೊಂದಿಗೆ ಇಟ್ಟುಕೊಂಡಿರುವ ಆತ್ಮೀಯ ಸಂಪರ್ಕವು, ಬಿಜೆಪಿ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುವಲ್ಲಿ ಸಹಕಾರಿಯಾಗಿವೆ.ಈ ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳುವುದು ಶತಃಸಿದ್ಧ” ಎಂದು ವಿಶ್ವಾಸದಿಂದ ನುಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜೊತೆಗೆ ಪರಿಸರದ ಹಿರಿಯರು, ಯುವಕರು, ಮಹಿಳೆಯರು ಹಾಜರಿದ್ದರು.