ಅಡ್ಡಹೊಳೆ ಕಾರಿನಲ್ಲಿ ಬಂದ ಮುಸ್ಲಿಂ ಜಿಹಾದಿಗಳ ತಂಡದಿಂದ ರಾತ್ರಿ ಅಮಾಯಕ ಹಿಂದೂ ಆಟೋ ರಿಕ್ಷಾ ಚಾಲಕರೊಬ್ಬರಿಗೆ ಹಲ್ಲೆ – ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಹಿಂದೂ ಸಂಘಟನೆಯ ಪ್ರಮುಖರು ಆಸ್ಪತ್ರೆಗೆ ಭೇಟಿ, ಗಾಯಾಳು ವಿಚಾರಣೆ – ಕಹಳೆ ನ್ಯೂಸ್
ಪುತ್ತೂರು: ನೆಲ್ಯಾಡಿ ಅಡ್ಡಹೊಳೆಯ ಪೆಟ್ರೋಲ್ ಪಂಪ್ ಬಳಿ ಕೆ ಎಲ್ ನೊಂದಾವಣೆಯ ಕಾರೊಂದರಲ್ಲಿ ಬಂದ ತಂಡ ಆಟೋ ರಿಕ್ಷಾ ಚಾಲಕ ಅಡ್ಡಹೊಳೆ ಪೇರಮಜಲು ವಿಶ್ವನಾಥ್ ಎಂಬವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ವಿಶ್ವನಾಥ್ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಆಶಾ ತಿಮ್ಮಪ್ಪ :
ರಿಕ್ಷಾ ಚಾಲಕ ವಿಶ್ವನಾಥ್ ಅವರಿಗೆ ಹಲ್ಲೆ ನಡೆದ ವಿಚಾರ ತಿಳಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ವಿಚಾರಿಸಿದ್ದಾರೆ. ಡಿವೈಎಸ್ಪಿ ಡಾ ವೀರಯ್ಯ ಹಿರೇಮಠ್, ಎಸ್.ಐ ಸುಚೇತ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನಿಂದ ಮಾಹಿತಿ ಪಡೆದು ಕೊಂಡಿದ್ದಾರೆ.