Sunday, November 24, 2024
ಸುದ್ದಿ

ಎ 30ರಂದು ಬೆಂಗಳೂರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್(ರಿ) ವತಿಯಿಂದ 18ನೇ ವರ್ಷದ ಯುವ ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಂಗಳೂರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್(ರಿ) ಇವರ ವತಿಯಿಂದ ಎ 30ರಂದು ಸಂಸ್ಥೆಯ ಆವರಣದಲ್ಲಿ 135ನೇ ತಿಂಗಳ ಕಾರ್ಯಕ್ರಮ ಹಾಗೂ ಮತ್ತು 18ನೇ ವರ್ಷದ ಯುವ ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಸಂಗೀತ ತಜ್ಞರಾದ ಡಾ. ಭಾಸ್ಕರ ಅಯ್ಯರ್ ಹಾಗೂ ಮಂಗಳೂರು SBI ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಡಾ. ಶ್ರೀಕಾಂತ್ ಶೆಣೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುನೀತ್ ಮತ್ತು ಶರಾವತಿ ಕುಂದಾಪುರ ಇವರ ಬಳಗದಿಂದ ದ್ವಂದ್ವ ದೇವರ ನಾಮ ಹಾಗೂ ಶಶಾಂಕ್ ಅಯ್ಯರ್ ವಿ ಮತ್ತು ಕುಸುಮ ಐಯ್ಯರ್ ಕೇರಳ ಇವರ ಸಾರಥ್ಯದಲ್ಲಿ ದ್ವಂದ್ವ ವೈಲಿನ್ ವಾದನ ನಡೆಯಲಿದೆ.
ರಾಜೇಶ್ ಕುಲಕರ್ಣಿ ತಂಡದಿAದ ದಾಸವಾಣಿ, ಬೆಳ್ತಂಗಡಿಯ ಕಶ್ಯಪ್ ಶೆಣೈ ಮತ್ತು ತಂಡದವರಿAದ ಕೊಳಲು ವಾದನ ನಡೆಯಲಿದೆ.
ಶಿರಸಿ ಶ್ರುತಿ ಹೆಗ್ಡೆ ಮತ್ತು ತಂಡದವರಿAದ ದಶಾವತಾರ ನೃತ್ಯ ರೂಪಕ ಬಳಿಕ ಹೊಸಪೇಟೆಯ ಶರಾವತಿ ಪ್ರಸಾದ್ ಮತ್ತು ತಂಡವರಿAದ ಶಾಸ್ತ್ರೀಯ ಸಂಗೀತ ಹಾಗೂ ಉಡುಪಿ ಪ್ರತಿಮಾ ಭಾರದ್ವಜ್ ಮತ್ತು ತಂಡದವರಿAದ ನೃತ್ಯಾಂಜಲಿ ನಡೆಯಲಿದೆ.
ಬಳಿಕ 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 93% ಕ್ಕಿಂತಲೂ ಅಧಿಕ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.