Recent Posts

Sunday, January 19, 2025
ಸುದ್ದಿ

ವೈಯಕ್ತಿಕ ದ್ವೇಷವಿಲ್ಲ, ಸಂಧಾನಕ್ಕೆ ‌ಒಪ್ಪುವುದಿಲ್ಲ: ಪಾನಿಪುರಿ ಕಿಟ್ಟಿ – ಕಹಳೆ ನ್ಯೂಸ್

ಬೆಂಗಳೂರು: ವೈಯಕ್ತಿಕವಾಗಿ ನನಗೂ, ವಿಜಯ್​ಗೂ ದ್ವೇಷವಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡ ಮೇಲೆ ಹಲ್ಲೆ ನಡೆದಿದ್ದು, ಇಂತಹ ಘಟನೆಯಿಂದ ಎಂಥವರಿಗೂ ಸಿಟ್ಟು ಬರುತ್ತದೆ. ಪ್ರಕರಣದಲ್ಲಿ ನಾನು ಕಾನೂನು ಮೊರೆ ಹೋಗಿದ್ದೇನೆ. ಅಲ್ಲದೆ, ಫಿಲಂ ಛೇಂಬರ್​ಗೂ ದೂರು ನೀಡಿದ್ದು, ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಪಾನಿಪುರಿ ಕಿಟ್ಟಿ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ನಟನಾಗಲಿ ಇನ್ನೊಬ್ಬರಿಗೆ ಮಾದರಿ ಆಗಬೇಕು. ಹಾಗಂತ ವಿಜಿ ವಿರುದ್ಧ ರೌಡಿ ಶೀಟರ್ ತೆರೆಯಲಿ ಎಂದು ನಾನು ಬಯಸುವುದಿಲ್ಲ. ಅದು ಕಾನೂನಿಗೆ ಬಿಟ್ಟ ವಿಚಾರ. ಆದರೆ, ವಿಜಯ್​ ಕ್ಷಮೆ ಕೇಳಿದರೂ, ನಾನು ಯಾವುದೇ ಕಾರಣಕ್ಕೂ ಸಂಧಾನಕ್ಕೆ ‌ಒಪ್ಪುವುದಿಲ್ಲವೆಂದು ಕಿಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯ್​ ವಿರುದ್ಧ ಚಿತ್ರರಂಗದಿಂದ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದೇವೆ. ಈ ವಿಚಾರವಾಗಿ ಕೆಲಕಾಲ ಕಾರ್ಯದರ್ಶಿ ಬಾ.ಮಾ. ಹರೀಶ್ ಹಾಗೂ ನಿರ್ಮಾಪಕ ಕೆ. ಮಂಜು ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯ್​ ಹಲ್ಲೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡರು ಇದು ವೈಯಕ್ತಿಕ ವಿಷಯ ಆಗಿರುವುದರಿಂದ ನಾವು ಚಿತ್ರರಂಗದಿಂದ ಬಹಿಷ್ಕರಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಿಜಯ್​ ಅವರು ಬಂದ ಕೂಡಲೇ ಇಬ್ಬರನ್ನು ಕೂರಿಸಿ ಮಾತನಾಡಿ ಬುದ್ಧಿವಾದ ಹೇಳುವುದಾಗಿ ಹೇಳಿದರು.