ಮೇ 2ರಿಂದ-4ವರೆಗೆ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ – ಕಹಳೆ ನ್ಯೂಸ್
ಹೈಸ್ಕೂಲು ಮತ್ತು ಹತ್ತನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಬಯಸುವ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ತರಂಗ-2023 ,ನರೇಂದ್ರ ಪ.ಪೂ.ಕಾಲೇಜಿನಲ್ಲಿ ಮೇ 2ರಿಂದ 4ರವರೆಗೆ ನಡೆಯಲಿದೆ.
ವಿವಿಧ ಸ್ತರದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವುದು ನಮ್ಮ ಸಂಸ್ಥೆಯ ಉದ್ದೇಶ.ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಅವರ ಪ್ರತಿಭೆಯ ಅಭಿವ್ಯಕ್ತಿಗೆ ಪೂರಕವಾದ ವೇದಿಕೆಯನ್ನು ಕಲ್ಪಿಸುವುದೇ ಈ ಕರ‍್ಯಕ್ರಮದ ಉದ್ದೇಶವಾಗಿದೆ.
2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರದಲ್ಲಿ ಅವಕಾಶವಿದೆ. ಇದರಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯನ್ನು ವೃದ್ಧಿಸುವ ನಿಟ್ಟಿನಲ್ಲಿಯೋಗ, ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಬಲಪಡಿಸುವಂತಹ ಚಟುವಟಿಕೆ ಆಧಾರಿತ ಕಲಿಕೆಯನ್ನು ಈ ಕಾರ್ಯಾಗಾರದಲ್ಲಿ ಅಯೋಜಿಸಲಾಗಿದೆ.ಕ್ರಾಫ್ಟ್ ಡಿಸೈನ್,ವಾರ್ಲಿ ಆರ್ಟ್,ಕ್ಲೇ ಮಾಡೆಲಿಂಗ್,ಅಬಾಕಸ್ ತರಗತಿಗಳು,ಪೇಂಟಿಂಗ್,ಮ್ಯೂಸಿಕ್ ಮತ್ತು ಡಾನ್ಸ್ಗೆ ಪೂರಕವಾದ ಚಟುವಟಿಕೆಗಳು,ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸುಲಭೋಪಾಯಗಳು,ಶಿಕ್ಷಣ
ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಬಗ್ಗೆ ಮಾಹಿತಿ,ಫನ್ ಗೇಮ್ಸ್ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಉಚಿತವಾಗಿ ನಡೆಯುವ ಈ ಶಿಬಿರವು ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 3:30 ರವರೆಗೆ ನಡೆಯಲಿದೆ.ಆಸಕ್ತವಿದ್ಯಾರ್ಥಿಗಳು ತಮ್ಮ ಹೆಸರನ್ನು E-mail : narendrapuc@gmail.com ಅಥವಾ 9481917888/6360168184/08251-298555 ನಂಬರ್ ಗೆ ಸಂಪರ್ಕಿಸುವ ಮೂಲಕ ಮೇ 1 ರ ಒಳಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪ್ರಥಮ ಪಿಯುಸಿಗೆ ದಾಖಲಾತಿ ಆರಂಭಗೊAಡಿದ್ದು,ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್
www.narendrapu.vivekanandaedu.org ಅಥವಾ
E-mail-narendrapuc@gmail.com ಅಥವಾ ಮೊಬೈಲ್
ಸಂಖ್ಯೆ:9481917888,08251-298555ನ್ನು ಸಂಪರ್ಕಿಸಬಹುದು. ಎಂದು ಸಂಸ್ಥೆಯ ಪ್ರಕಟಣೆ
ತಿಳಿಸಿದೆ.