Saturday, November 23, 2024
ಸುದ್ದಿ

ಲಿಫ್ಟ್ ಚಾಲನೆಯಲ್ಲಿ ರೋಪ್ ತುಂಡಾಗಿ ಬಿದ್ದು ಕಾರ್ಮಿಕರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಮಂಗಳೂರು: ಲಿಫ್ಟ್ ಚಾಲನೆಯಲ್ಲಿ ರೋಪ್ ಹಾಗೂ ಚೈನ್ ಪುಲ್ಲಿ ತುಂಡಾಗಿ ಬೀಳುವ ಸಂದರ್ಭ ಯಾವುದೇ ಸುರಕ್ಷಿತ ಉಪಕರಣಗಳನ್ನು ಬಳಸದೆ ಲಿಫ್ಟ್ ಒಬ್ಬ ಕಾರ್ಮಿಕ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಗ್ರ ಕೂಳೂರಿನ ಪ್ರತಿಷ್ಠಿತ ಸಂಸ್ಥೆಯ ಏಳು ಅಂತಸ್ತಿನ ಕಟ್ಟಡದಲ್ಲಿ ಕಳೆದ ವಾರ ನಡೆದ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೊಲ್ಡ್ವಿನ್ ಫರ್ನಾಂಡೀಸ್ ಹಾಗೂ ಲೋಕೇಶ್ ರೈ ಮಾಲಕತ್ವದ Swift space Elevators Mangalore ಎಂಬ ಲಿಫ್ಟ್ ಸಂಸ್ಥೆಯ ಕಳಪೆ ಮಟ್ಟದ ಕಾಮಗಾರಿಯಿಂದ ಬಂಗ್ರ ಕೂಳೂರಿನ ಪ್ರತಿಷ್ಠಿತ ಸಂಸ್ಥೆ ಏಳು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಚಾಲನೆಯಲ್ಲಿ ರೋಪ್ ಹಾಗೂ ಚೈನ್ ಪುಲ್ಲಿ ತುಂಡಾಗಿ ಬೀಳುವ ಸಂದರ್ಭ ಲಿಫ್ಟ್ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ರೋಪ್ ಹಾಗೂ ಚೈನ್ ಪುಲ್ಲಿ ತುಂಡಾಗಿ ಬಿದ್ದು ತೀವ್ರ ಗಾಯಗಳಾಗಿದೆ. ಗಾಯಳು ಸಂದೀಪ್ ಮುಲ್ಕಿ ಎಂಬವರನ್ನು ಕೊಡಿಯಾಲ್ ಬೈಲ್ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಇಡಲಾಗಿತ್ತು.ಇಬ್ಬರು ಲಿಫ್ಟ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಿಫ್ಟ್ ಚಾಲನೆಯಲ್ಲಿ ಇರುವಾಗ ರೋಪ್ ಹಾಗೂ ಚೈನ್ ಪುಲ್ಲಿ ತುಂಡಾಗಿ ಬೀಳುವ ಸಮಯದಲ್ಲಿ ಯಾವುದೇ ಸುರಕ್ಷಿತ ಉಪಕರಣಗಳನ್ನು ಕಂಪನಿಯ ಮಾಲೀಕರು ಅಳವಡಿಸದ ಕಾರಣ ನೇರವಾಗಿ ಮೇಲಿನ ಏಳನೇ ಅಂತಸ್ತಿನಿಂದ ಕೆಳಅಂತಸ್ತಿಗೆ ಬಂದು ಅಪ್ಪಳಿಸುವ ಕಾರಣ ಹಾಗೂ ಕಳಪೆ ಮಟ್ಟದ ಸಾಮಗ್ರಿಗಳನ್ನು ಅಳವಡಿಸಿ ಲಿಫ್ಟ್ ತಯಾರಿಸುವುದೇ ಈ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬಡ ಕಾರ್ಮಿಕರ ಬಾಳಲ್ಲಿ ಚೆಲ್ಲಾಟವಾಡುತ್ತಿರುವ ಲಿಫ್ಟ್ ಸಂಸ್ಥೆಯ ವಿರುದ್ಧ ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.