Recent Posts

Monday, January 27, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ತವರು ಮನೆಗೆ ಬಂದಿದ್ದ ಉಪ್ಪಿನಂಗಡಿ ಬಿಳಿಯೂರಿನ ವಿವಾಹಿತ ಮಹಿಳೆ ನಾಪತ್ತೆ : -ಕಹಳೆ ನ್ಯೂಸ್

ಉಪ್ಪಿನಂಗಡಿ: ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆ ನಾಪತ್ತೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಗ್ರಾಮದ ಕಾನ ದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಳಿಯೂರು ಗ್ರಾಮದ ಕಾನ ನಿವಾಸಿ ಶ್ವೇತಾ(24) ನಾಪತ್ತೆಯಾದ ಮಹಿಳೆ. ಈ ಬಗ್ಗೆ ಮಹಿಳೆಯ ತಂದೆ ಅಣ್ಣು ಮೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದಾಕೆ ವಿವಾಹಿತೆಯಾಗಿದ್ದು, ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಅವರು ಎಪ್ರಿಲ್ ೨೪ರ ಸಂಜೆಯಿAದ ನಾಪತ್ತೆಯಾಗಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆ ಕನ್ನಡ ಹಾಗೂ ತುಳು ಭಾಷೆಯನ್ನು ಮಾತನಾಡುವ, ಸಾಧಾರಣ ಕಪ್ಪು ಮೈ ಬಣ್ಣದವರಾಗಿದ್ದು, ಎಲ್ಲಿಯಾದರೂ ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.