Saturday, January 25, 2025
ಬಂಟ್ವಾಳಸುದ್ದಿ

ಯುವಕನ ಚಿಕಿತ್ಸೆಗೆ ನೇರವಾದ ಕುಂಟಾಲಪಲ್ಕೆ ಪೆರಿಯಾರು ದೋಟ ಘಟಕದ ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಯಕರ್ತರು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ: ಅಕ್ಸಿಡೆಂಟ್ ಆಗಿ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲೆ ಕಷ್ಟದ ಜೀವನ ನಡೆಸುತ್ತಿರುವ ಭಜರಂಗದಳ ಕಾರ್ಯಕರ್ತ ಪ್ರದೀಪ್ ಬಾವಂತಬೆಟ್ಟು ಅವರ ಮನೆಯವರಿಗೆ ಕುಂಟಾಲಪಲ್ಕೆ ಪೆರಿಯಾರು ದೋಟ ಘಟಕದ ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಯಕರ್ತರು ಸಹಾಯ ಹಸ್ತ ನೀಡಿದರು.
ಸೇವಾ ಸುರಕ್ಷಾ ಸಂಸ್ಕಾರ ದ್ಯೇಯ ವಾಕ್ಯದಂತೆ ಭಜರಂಗದಳ ಕಾರ್ಯಕರ್ತರು, ಊರಿನ ಕೊಡುಗೈ ದಾನಿಗಳು, ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಒಟ್ಟು ಸೇರಿ ಸುಮಾರು 58 ಸಾವಿರ ಧನಸಹಾಯ ಒಟ್ಟುಗೂಡಿಸಿ ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಚಾಲಕರಾದ ಗುರುರಾಜ್ ಬಂಟ್ವಾಳ ಪ್ರಸಾದ್ ಕುಮಾರ್ ರೈ ಸಮ್ಮುಖದಲ್ಲಿ ಪ್ರದೀಪ್ ಬಾವಂತಬೆಟ್ಟು ಅವರ ಮನೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್ ಶಿವಪ್ರಸಾದ್ ತುಂಬೆ ಸಂತೋμï ಸರಪಾಡಿ ಕಿರಣ್ ಕುಮ್ಡೇಲ್ ಪ್ರಸಾದ್ ಬೆಂಜನಪದವು ಪ್ರವೀಣ್ ಕುಂಟಾಲಪಲ್ಕೆ ಭಜರಂಗದಳ ಸದಸ್ಯರು ಕಾರ್ಯಕರ್ತರು, ಬಿಜೆಪಿಯ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು