ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ವಿವಿಧ ಭಾಗದಲ್ಲಿ ಸಂಚರಿಸಿ, ಪ್ರಮುಖ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ಬಂಟ್ವಾಳ: ನಿಮ್ಮ ನಿಮ್ಮ ಬೂತ್ ಗಳಲ್ಲಿ ಪ್ರತಿ ಮತವನ್ನು ಬಿಜೆಪಿ ಮತವಾಗಿ ಪರಿವರ್ತಿಸಿ ಬಂಟ್ವಾಳದಲ್ಲಿ ಕಾಂಗ್ರೆಸ್ ಮುಕ್ತ ಬಂಟ್ವಾಳವಾಗಿ ಮಾಡಲು ಕಾರ್ಯಕರ್ತರು ಕೆಲಸ ಮಾಡಿ ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ತಿಳಿಸಿದರು.
ಬಂಟ್ವಾಳ ಬಿಜೆಪಿ ಅಭ್ಯರ್ಥಿ ಅವರು ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರು, ನರಿಕೊಂಬು ಗ್ರಾಮದ ವಿವಿಧ ಭಾಗದಲ್ಲಿ ಸಂಚರಿಸಿ, ಪ್ರಮುಖ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.
ಕಾಂಗ್ರೇಸ್ ಗೆ ಅಧಿಕಾರ ನೀಡಿ ಯುವಕರನ್ನು ಜೈಲಿಗಟ್ಟಿ, ಕ್ರಿಮಿನಲ್ ಗಳಾಗಿ ಮಾಡಿದ ನೆನಪು ಇನ್ನೂ ಮಾಸಿಲ್ಲ, ಧರ್ಮ ಧರ್ಮದ ನಡುವೆ ವಿಷಬೀಜಬಿತ್ತಿ ಕೋಮುದ್ವೇಷದ ಮೂಲಕ ಅಶಾಂತಿ ನಿರ್ಮಾಣ ಮಾಡಿದ ಕಾಂಗ್ರೆಸ್ ಗೆ ಯಾವ ಕಾರಣಕ್ಕೂ ಮತ ನೀಡಬೇಡಿ ಅವರು ಮನವಿ ಮಾಡಿದರು.
ಅಭಿವೃದ್ಧಿ ಜೊತೆಗೆ ರಾಷ್ಟ್ರೀಯತೆಯನ್ನು ಉಳಿಸುವ ಸಲುವಾಗಿ ಬಿಜೆಪಿಯನ್ನು ಗೆಲ್ಲಿಸಬೇಕು. ನಮ್ಮೊಳಗಿನ ಸಣ್ಣ ಪುಟ್ಟ ವೈಯಕ್ತಿಕ ವಿಚಾರಗಳಿಗೆ ಪಕ್ಷವನ್ನು ಬಲಿಮಾಡದೆ ಕ್ಷೇತ್ರದ ಜನರ ಶಾಂತಿ ನೆಮ್ಮದಿಯ, ಸಮೃದ್ಧ ಜೀವನಕ್ಕೆ ಮತ್ತೆ ಬಂಟ್ವಾಳದಲ್ಲಿ ಬಿಜೆಪಿ ಅರಳಬೇಕು ಎಂದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಧರ್ಮಸ್ಥಳ ರಸ್ತೆಯಿಂದ ನರಿಕೊಂಬು ಗ್ರಾಮ ಸಂಪರ್ಕಕ್ಕೆ ಜಕ್ರಿಬೆಟ್ಟು ಎಂಬಲ್ಲಿ 135 ಕೋಟಿ ವೆಚ್ಚದಲ್ಲಿ ಸಂಪರ್ಕ ಸೇತುವೆ ಮತ್ತು ಕುಡಿಯುವ ನೀರಿನ ಕೊರತೆ ನೀಗಿಸಲು ಅಣೆಕಟ್ಟು ನಿರ್ಮಾಣದ ಕಾಮಗಾರಿಗೆ ವೇಗ ನೀಡಿದ್ದು, ಇದರ ಜೊತೆಗೆ ಕೋಟ್ಯಾಂತರ ರೂ ಅನುದಾನಗಳ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಕ್ಷೇತ್ರದಲ್ಲಿ ಮಾಡಲಾದ ಅಭಿವೃದ್ಧಿಯ ವಿಚಾರಧಾರೆಗಳನ್ನು ತಿಳಿಸಿ ಗೌರವದಿಂದ ಮತವನ್ನು ಕೇಳುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿನುತಾ ಪುರುಷೋತ್ತಮ , ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್ ಮಡಿಮೊಗರು, ಸದಸ್ಯರಾದ ಕಿಶೋರ್ ಶೆಟ್ಟಿ, ರವಿ ಅಂಚನ್, ಅರುಣ್ ಬೋರುಗುಡ್ಡೆ, ರಂಜಿತ್ ಕೆದ್ದೇಲು, ಪುರುಷೋತ್ತಮ ಎಸ್, ಉಷಾಲಾಕ್ಷಿ, ಮಮತಾ, ರತ್ನಾ ನಿನ್ನಿಪಡ್ಪು, ಯೋಗಿಶ್ ಶಾಂತಿಲ, ಶುಭ ಪ್ರಮುಖರಾದ ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್ ಮಾದವ ಕರ್ಬೆಟ್ಟು, ಸುರೇಶ್ ಕೋಟ್ಯಾನ್, ಕೊರಗಪ್ಪ ಬಂಗೇರ ಕೆದ್ದೆಲು, ರಘ ಸಪಲ್ಯ, ಕೇಶವ ಬರ್ಕೆ, ಸಂತೋಷ್, ಅಶೋಕ್ ಮರ್ದೊಳಿ, ಯತೀಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ , ಸೀತಾರಾಮ ದೋಟ, ನವೀನ್ ಕರ್ಬೆಟ್ಟು, ಉದಯಶಾಂತಿ, ನಾಗೇಶ್ ನಿನ್ನಿಪಡ್ಪು ರವಿ ಹಿತ್ತಿಲಕೋಡಿ, ಪುರುಷ ನಿನ್ನಿಪಡ್ಪು, ಶರತ್ , ರೋಹಿತ್ ಮರ್ದೋಳಿ, ಬೋಜರಾಜ್ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.