Friday, January 24, 2025
ಬಂಟ್ವಾಳಸುದ್ದಿ

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಸ್ವಸ್ತಿ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 39ನೇ ಸಂಭ್ರಮಾಚರಣೆಯ ಪ್ರಯುಕ್ತ 15ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಂಗ್ಲೆ ಮೈದಾನದಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಅವರು ದಿಬ್ಬಣ ಮೆರವಣಿಗೆಯನ್ನು ಉದ್ಘಾಟಿಸಿದರು. ಬಳಿಕ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ನಡೆಯಿತು. ಸಭಾಂಗಣದಲ್ಲಿ ವಧು, ವರರನ್ನು ಸಾಂಪ್ರಾದಾಯಿಕವಾಗಿ ಎದುರುಗೊಳ್ಳಲಾಯಿತು.

ಕೃಷ್ಣ ಭಟ್ ಕಾರ್ಕಳ ಅವರ ಪೌರೋಹಿತ್ಯದಲ್ಲಿ, ಮಧ್ಯಾಹ್ನ 11.22ರ ಶುಭ ಮುಹೂರ್ತದಲ್ಲಿ 9 ಜೋಡಿ ವಧು-ವರರಿಗೆ ಸಾಂಪ್ರದಾಯಿಕ, ಶಾಸ್ತ್ರೊಕ್ತವಾಗಿ ಸಾಮೂಹಿಕ ವಿವಾಹ ನಡೆಯಿತು.

ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನವದೆಹಲಿ ಅನಾರೋಖ್ ಪ್ರೈ.ಲಿ.ನ ವೈಸ್ ಚೆಯರ್ ಮೆನ್ ಸಂತೋμï ಜೆ.ಪಿ. ಅವರು ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಎನ್ನುವುದು ದೇವರ ಸೇವೆ ಮಾಡಿದಂತೆ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ನಡೆಸಲಾಗುವ ಉಚಿತ ವಿವಾಹ ಪುಣ್ಯ ಕಾರ್ಯವಾಗಿದ್ದು, ಇಲ್ಲಿ ವಿವಾಹವಾದ ದಂಪತಿಗಳು ಭಾಗ್ಯವಂತರು, ಇಂತಹ ಸಾಮಾಜಿಕ ಬದ್ದತೆಯ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇದುವರೆಗೆ ನಡೆದ ಸಾಮೂಹಿಕ ವಿವಾಹದಲ್ಲಿ ಒಟ್ಟು 462 ಮಂದಿಗೆ ವಿವಾಹ ಮಾಡಲಾಗಿದೆ. ಬಡ, ಹಿಂದುಳಿದ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಮಂಗಲಸೂತ್ರ ವಿತರಿಸಿದ ಡಬ್ಲು ಡಿ ಗುತ್ತಿಗೆದಾರ ಪ್ರವೀಣ್ ಎಸ್.ದರ್ಬೆ ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ. ಸದಾನಂದ ಪೂಜಾರಿ (ವೈದ್ಯಕೀಯ ಕ್ಷೇತ್ರ), ವಿಜಯ ಕುಮಾರ್ ಕೋಡಿಯಾಲ್ ಬಲ್(ಕಲಾ ಕ್ಷೇತ್ರ), ಕಡಬ ಶ್ರೀನಿವಾಸ ರೈ (ಯಕ್ಷಗಾನ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಪರಿಸರದ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂತೋಷ್ ಜೆ.ಪಿ. ಮತ್ತು ವಿ.ಹಿ0.ಪ. ಕುಕ್ಕಳ ವತಿಯಿಂದ ತುಂಗಪ್ಪ ಬಂಗೇರ ಅವರನ್ನು ಸಮ್ಮಾನಿಸಲಾಯಿತು.

ಮಾಜಿ ಸಚಿವ ನಾಗರಾಜ ಶೆಟ್ಟಿ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ, ಪಿಲಾತಬೆಟ್ಟು ಸೇ.ಸ.ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಪ್ರಬಂಧಕಿ ಬಬಿತಾ ದಿನೇಶ್, ಉದ್ಯಮಿ ಹರೀಂದ್ರ ಪೈ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಮುತ್ತೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ಅರ್ಚಕ ಹರಿಯಪ್ಪ, ದೀಪಕ್ ಪೂಜಾರಿ ಬಂಟ್ವಾಳ, ಉಪನ್ಯಾಸಕ ರಂಜಿತ್ ಎಚ್.ಡಿ., ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಪದಾಧಿಕಾರಿಗಳಾದ ಪಿ.ಎಂ.ಪ್ರಭಾಕರ,ರಾಜೇಶ್ ಪಿ. ಬಂಗೇರ, ಜಯರಾಜ ಅತ್ತಾಜೆ, ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಅಗಮಿಸಿ ನೂತನ ವಧು-ವರರಿಗೆ ಶುಭಹಾರೈಸಿದರು.

ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.