Friday, January 24, 2025
ಉಡುಪಿರಾಜಕೀಯರಾಜ್ಯಸುದ್ದಿ

ಕಾಪು ಕ್ಷೇತ್ರದ ‘ಸುರೇಶ್ ಶೆಟ್ಟಿ ಜಾತಿಧರ್ಮಗಳ ಭೇದವಿಲ್ಲದ ಸಜ್ಜನ ರಾಜಕಾರಣಿ’ ; ಕಾಪುವಿನ ನಾನಾ ಕಡೆಗಳಲ್ಲಿ ಮತಯಾಚನೆಯಲ್ಲಿ ಪಾಲ್ಗೊಂಡ ಪ್ರಮೋಧ್ ಮಧ್ವರಾಜ್ – ಕಹಳೆ ನ್ಯೂಸ್

ಕಾಪು, ಏ 01 : ಕಾಪು ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ, ಜಾತಿಧರ್ಮಗಳ ಭೇದವಿಲ್ಲದ ಪರೋಪಕಾರಿ ಸಜ್ಜನ ರಾಜಕಾರಣಿ. ಕ್ಷೇತ್ರದಲ್ಲಿ ಅವರಿಂದ ಯಾರಿಗೂ ಎಂದೂ ತೊಂದರೆಯಾ ಗದು. ಕ್ಷೇತ್ರದಲ್ಲಿ ಜಾತಿ ಧರ್ಮಗಳ ಆಧಾರದಲ್ಲಿ ಮತ ಕೇಳುವವರನ್ನು ತಿರಸ್ಕರಿಸಿ ಗುರ್ಮಯವರ ಪರವಾಗಿ ಮತ ಚಲಾಯಿಸಿ ಎಂದು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಕಾಪುವಿನ ನಾನಾ ಕಡೆಗಳಲ್ಲಿ ಮತಯಾಚನೆಯಲ್ಲಿ ಪಾಲ್ಗೊಂಡು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4 ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಪರಿಚಯಿಸಿದೆ ಅಂದರೆ ಹಳಬರು ಕೆಲಸ ಮಾಡಿಲ್ಲ. ಎಂದಲ್ಲ, ಹೊಸಬರಿಗೆ ಅವಕಾಶ ನೀಡಿದರೂ ನಮ್ಮಲ್ಲಿ ಒಗ್ಗಟ್ಟಿನ ಸಮಸ್ಯೆಯಿಲ್ಲ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಲಾಲಾಜಿ ಗುರ್ಮೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದರು.ಮೊಗವೀರ ಸಮುದಾಯಕ್ಕೆ ಅತ್ಯಂತ ಸೂಕ್ತ ಪಕ್ಷವೆಂದರೆ ಬಿಜೆಪಿ, ಹಿಂದೆ ಕೇವಲ 50 ಸಾವಿರ ಕಿ.ಲೀ. ಡಿಸೇಲ್ ಇದ್ದದ್ದನ್ನು ಬೊಮ್ಮಾಯಿ ಸರಕಾರ 2 ಲಕ್ಷ ಕಿ.ಲೀ.ಗೆ ಏರಿಸಿದೆ.. ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ ನೇರವಾಗಿ ಸೀಮೆ ಎಣ್ಣೆ ಸರಬರಾಜು ಮಾಡಲಾಗುತ್ತಿದೆ. ವಾರದ ಹಿಂದೆ 1488 ಕಿ ಲಿ. ಸೀಮೆ ಎಣ್ಣೆ ಬಿಡುಗಡೆ ಯಾಗಿದೆ. ಮೀನುಗಾರರಿಗೆ ವಿವಿಧ ರೀತಿಯಲ್ಲಿ ಬಿಜೆಪಿ ಅನುಕೂಲ ಕಲ್ಪಿಸಿದೆ. ಹೆಮಾಡಿ ಬಂದರು ನಿರ್ಮಾಣಕ್ಕೆ ಚಾಲನೆ ಬಿಜೆಪಿ ಸರಕಾರದ ದೊಡ್ಡ ಕೊಡುಗೆಯಾಗಿದೆ. ಗುರ್ಮ ಶಾಸಕರಾಗಿ ಮೀನುಗಾರರ ಹಿತಕಾಯಲು ಬದ್ದುದ್ದು ನಾನು ಮತ್ತು ಲಾಲಾಜಿ ಮೆಂಡನ್ ಅವರ ಹಿಂದೆ ನಿಂತು ಮಾರ್ಗದರ್ಶನ ಮಾಡಲಿದ್ದೇವೆ ಎಂದಿದ್ದಾರೆ.ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಕಾವ್ಯದರ್ಶಿ ಮಾತನಾಡಿ, ನನ್ನ ಪರವಾಗಿ ಶ್ರಮಿಸುತ್ತಿರುವ ಗೋಪಾಲಕೃಷ್ಣ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಪ್ರತಿಕ್ರಿಯೆ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ. ಅಮಿತ್ ಶಾ ಕಾರ್ಯಕ್ರಮವನ್ನೂ ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಈ ಋಣವನ್ನು ತೀರಿಸಲು ನಾನು ಸಾಕಷ್ಟು ಕೆಲಸಮಾಡಬೇಕಾ ಗಿದ್ದು, ಕ್ಷೇತ್ರದ ಜನರ ಹಿತಕಾಯುವ ಕೆಲಸ ಮಾಡುತ್ತೇನೆ ಎಂಬ ಭರವಸೆ ಇಟ್ಟುಕೊಳ್ಳಿ ಎಂದರು.ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಸುರೇಶ್‌ ಶೆಟ್ಟಿ ಬಡಬಗ್ಗರ ಬಗ್ಗೆ ಕರುಣೆ ಪ್ರೀತಿ ಇಟ್ಟುಕೊಂಡವರು, ಗೋಶಾಲೆ ಗೋರಕ್ಷಣೆ ಮಾಡುತ್ತಿದ್ದಾರೆ. ದುರ್ಬಲರ ಮದುವೆ ಆರೋಗ್ಯಕ್ಕೆ ಸಹಾಯ ನೀಡುತ್ತಾ ಬಂದಿದ್ದಾರೆ. ಅವರ ಒಳ್ಳೆಯತನ ಮತ್ತು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿಕಾರ್ಯಗಳು ಗೆಲುವಿಗೆ ಪೂರಕವಾಗಲಿದೆ ಎಂದರು.ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಮಂಡಲ ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಕಿರಣ್ ಆಳ್ವಾ ಮತ್ತು ಇತರರು ಉಪಸ್ಥಿತರಿದ್ದರು.‌

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು