Friday, September 20, 2024
ಸುದ್ದಿ

ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ರಮಾನಾಥ ರೈ ವಿರೋಧ – ಕಹಳೆ ನ್ಯೂಸ್

ಮಂಗಳೂರು: ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ಮಾಜಿ ಸಚಿವ ರಮಾನಾಥ ರೈ ವಿರೋಧ ವ್ಯಕ್ತಪಡಿಸಿದ್ದಾರೆ.

87 ವರ್ಷಗಳ ಇತಿಹಾಸವುಳ್ಳ, ಲಾಭದಾಯಕ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಮತ್ತು ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸುವುದು ಸರಿಯಲ್ಲ. ಜಿಲ್ಲೆಯ ಹೆಮ್ಮೆ ಆಗಿರುವ ಬ್ಯಾಂಕನ್ನು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಜನತೆ ಇದನ್ನು ಒಟ್ಟಾಗಿ ವಿರೋಧಿಸಬೇಕಿದೆ. ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾಹೀರಾತು

ಮಂಗಳೂರಿನಲ್ಲಿ ಎ.ಬಿ. ಶೆಟ್ಟಿ ಸ್ಥಾಪಿಸಿದ್ದ ವಿಜಯ ಬ್ಯಾಂಕ್ ದೇಶಾದ್ಯಂತ ಶಾಖೆ ಹೊಂದಿದೆ. ಬ್ಯಾಂಕ್ ನಷ್ಟದಲ್ಲಿದ್ದಾಗ ನೌಕರರು ಸಂಬಳ ಬಿಟ್ಟುಕೊಟ್ಟು ಬ್ಯಾಂಕನ್ನು ಕಾಪಾಡಿದ್ದಾರೆ. ಜಿಲ್ಲೆಯ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಗ್ರಾಹಕರು-ನೌಕರರು ತೊಂದರೆಗೀಡಾಗುವರು. ಜಿಲ್ಲೆಯ ಜನತೆ ವಿಜಯ ಬ್ಯಾಂಕ್ ಜತೆಗೆ ನಿಲ್ಲುವಂತೆ ಕೋರುತ್ತೇನೆ, ಸಂಸದರ ಮೌನವನ್ನು ಖಂಡಿಸುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ 2 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿ ಬಂಡವಾಳಶಾಹಿಗಳ ಪರ ನಿಂತಿದ್ದಾರೆ. ರೈತರ ಅಭ್ಯುದಯಕ್ಕಿರುವ ಗ್ರಾಮೀಣ ಬ್ಯಾಂಕ್​ಗಳ ವಿಲೀನಕ್ಕೂ ಮೋದಿ ಕೈಹಾಕಿದ್ದಾರೆ. ಚುನಾವಣೆ ಹತ್ತಿರ ಬಂದಾಗ ರಾಮಮಂದಿರ ನಿರ್ಮಾಣ ಬಗ್ಗೆ ಮಾತನಾಡಲಾರಂಭಿಸಿದ್ದಾರೆ ಎಂದರು.