Friday, January 24, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲ ಇದರ ‘ಪಂಚಮ ವರ್ಧಂತ್ಯುತ್ಸವ’ ಸಂಪನ್ನ : ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನದ ಗೌರವಾರ್ಪಣೆ -ಕಹಳೆ ನ್ಯೂಸ್

ಶ್ರೀ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲ ಇದರ ಪಂಚಮ ವರ್ಧಂತ್ಯುತ್ಸವವು ನಿನ್ನೆ ವಿಜೃಂಭಣೆಯಿAದ ನಡೆದಿದೆ.


ವೇದಮೂರ್ತಿ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಅರ್ಧ ಏಕಾಹ ಭಜನೆ ಪ್ರಾರಂಭಗೊAಡಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಮಂಕುಡೆ – ಕುಡ್ತಮುಗೇರು ಸಂಚಾಲಕರಾದ ರಮೇಶ್ ಮಂಕುಡೆ, ಪ್ರಗತಿಪರ ಕೃಷಿಕರಾದ ರಾಜಾರಾಮ್ ಹೆಗ್ಡೆ ಕುದ್ರಿಯ, ಹಿರಿಯರಾದ ದೂಮಪ್ಪ ನಾಯ್ಕ ಕುಂಟ್ರಕಲ, ಪ್ರಗತಿಪರ ಕೃಷಿಕರಾದ ಕುಶಾಲಪ್ಪ ಗೌಡ ಮಲಾರು, ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ನಾಗವನ – ಕುಂಟ್ರಕಲ ಇದರ ಅಧ್ಯಕ್ಷರಾದ ಸುನೀತಾ ಕುಂಟ್ರಕಲ ಭಾಗಿಯಾಗಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅರ್ಧ ಏಕಾಹ ಭಜನೆಯಲ್ಲಿ ಶ್ರೀ ಮಾಹಮ್ಮಾಯೀ ಭಜನಾ ಮಂಡಳಿ(ರಿ.) ನಾಗವನ –ಕುಂಟ್ರಕಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಮಂಕುಡೆ-ಕುಡ್ತಮುಗೇರು, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.)ದಾಸಗಿರಿ-ಕುಳಾಲು, ನವಚೇತನ ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಸಾಲೆತ್ತೂರು, ಶ್ರೀ ಜಲದುರ್ಗಪರಮೇಶ್ವರೀ ಭಜನಾ ಮಂಡಳಿ,ಪಡ್ಪು, ಶ್ರೀ ವಿಶ್ವ ಕರ್ಮ ಯುವಕ ಸಂಘ ಬಾಯಾರು, ಶ್ರೀ ಸೂರ್ಯೇಶ್ವರ ಭಜನಾ ಮಂಡಳಿ ಪಾತೂರು, ಶ್ರೀ ಮಹಮ್ಮಾಯೀ ಭಜನಾ ಮಂಡಳಿ(ರಿ) ನಾಗವನ-ಕುಂಟ್ರಕಲ ಇದರ ಮಕ್ಕಳ ತಂಡದಿAದ ಕುಣಿತಾ ಭಜನೆ, ಇವರುಗಳ ಉಪಸ್ಥಿತಿಯಲ್ಲಿ ಭಜನಾ ಮಂಗಲೋತ್ಸವ ಸಂಪನ್ನಗೊAಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ ಶ್ರೀ ಗಣಪತಿ ಹವನ ನೆರವೇರಿದ್ದು, ಬಳಿಕ ಶ್ರೀ ವನದುರ್ಗಾ ಪೂಜೆ ನಡೆದಿದೆ. ಮಧ್ಯಾಹ್ನ ದೇವರ ಮಹಾಮಂಗಳಾರತಿ, ಪ್ರಸಾದ ವಿತರಣೆ ತದನಂತರ ಅನ್ನಸಂತರ್ಪಣೆ ನಡೆದಿದೆ.

ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ, ಕಣಿಯೂರು – ಕನ್ಯಾನ ಇವರ ದಿವ್ಯ ಉಪಸ್ಥಿತಿಯಲ್ಲಿ, ಪುಟಾಣಿ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕçತಿಕ ಕಾರ್ಯಕ್ರಮಗಳು ನಡೆದಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ.


ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿದ್ರು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ ಕಾನ ವಹಿಸಿದ್ದಾರೆ. ಉಪನ್ಯಾಸನವನ್ನು ವಿಶ್ವ ಹಿಂದೂ ಪರಿಷತ್, ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ನೀಡಿದ್ರು. ಈ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವದಿಂದ ಸನ್ಮಾನಿಸಲಾಯಿತು.
ಇನ್ನೂ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ ಕಣಿಯೂರು-ಕನ್ಯಾನ, ಕುಂಟ್ರಕಲದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವಾ ಪ್ರತಿನಿಧಿ ಶ್ರೀಮತಿ ಕುಶಾಲ ಕುಳಾಲು ಪಾಲ್ಗೊಂಡಿದ್ದಾರೆ.

ಇನ್ನೂ ಕಲಾ ಸಂಗಮ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರಚಿಸಿ, ನಿರ್ದೇಶಿರುವ, ಸ್ವರಾಜ್ ಶೆಟ್ಟಿ ಅಭಿನಯಿಸುವ ‘ಮಣಿಕಂಠನ ಮಹಿಮೆ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳುವ ಮೂಲಕ ಕಾರ್ಯಕ್ರಮಗಳು ಸಂಪನ್ನಗೊAಡಿದೆ.