Recent Posts

Monday, January 20, 2025
ಸುದ್ದಿ

ಸೇವೆಗೆ ಇನ್ನೊಂದು ಹೆಸರೇ “ವಿಶ್ವ ಹಿಂದೂ ಪರಿಷತ್ ಬಜರಂಗದಳ” – ಕಹಳೆ ನ್ಯೂಸ್

5 ವರ್ಷದಿಂದ ಒಂದು ಕುಟುಂಬವನ್ನ ದತ್ತು ತೆಗೆದುಕೊಂಡು ಅವರಿಗೆ ಆಶ್ರಯ ಕೊಡುವ ಜೊತೆಗೆ ಆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಆ ಕುಟುಂಬದ ಹಿರಿಯ ಮಗಳಿಗೆ ಮದುವೆ ಮಾಡಿಸುವ ಮುಖಾಂತರ ಬಂಟ್ವಾಳ ತಾಲೂಕಿನ ಮಂಚಿ ಘಟಕದ ಬಜರಂಗದಳ ಕಾರ್ಯಕರ್ತರು ಶ್ರೇಷ್ಠ ಕಾರ್ಯವನ್ನು ಮಾಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು


ಇವರ ಮದುವೆ ಕಾರ್ಯ ಎಪ್ರಿಲ್ 30 ರಂದು ಮಂಚಿ ದೇವಸ್ಥಾನದಲ್ಲಿ ನಡೆಯಿತು.ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪ್ರಖಂಡ ಮಂಚಿ ಗ್ರಾಮ ಸಮಿತಿ ಘಟಕದ ಕಾರ್ಯಕರ್ತರ ಸೇವಾ ಕಾರ್ಯ ನಡೆಯಿತು
ಈ ಶುಭಸಂದರ್ಭದಲ್ಲಿ ಸ್ವಯಂಸೇವಕ ಸಂಘದ ಪ್ರಮುಖರಾದ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರದರ್ಶಿಗಳಾದ ಶರಣ್ ಪಂಪುವೆಲ್, ಬಜರಂಗದಳ ವಿಭಾಗ ಸಹ ಸಂಯೋಜಕರಾದ ಪುನೀತ್ ಅತ್ತಾವರ, ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾಕ್ಟರ್ ಪ್ರಸನ್ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿಶ್ವ ಹಿಂದೂ ಪರಿಷತ್ತ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್, ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್ ಸಚಿನ್ ಮೆಲ್ಕಾರ್.ವಿಜಿತ್ ಮಂಚಿ ರಮೇಶ್ ರಾವ್ ಪತ್ತುಮಡಿ ಹಾಗೂ ಕಾರ್ಯಕರ್ತರೂ ಉಪಸ್ಥಿತಿ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು