Sunday, January 19, 2025
ಸುದ್ದಿ

ದೇಯಿಬೈದೇತಿ ಅಪಮಾನ ಖಂಡಿಸಿ ಬೃಹತ್ ಪಾದಾಯಾತ್ರೆ.

ಪುತ್ತೂರು : ಸಾಮಾಜಿಕ ಜಾಲತಾಣಗಲ್ಲಿ ಈಗಾಗಲೇ ವೈರಲ್ ಆದ ದೇಯಿ ಬೈದೇತಿಗೆ ಅಪಮಾನ
ಮಾಡುವಂತಹ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿ.ಜೆ.ಪಿ. ಖಂಡಿಸಿದ್ದು , ಇದೀಗ ಬೃಹತ್ ಪಾದಾಯಾತ್ರೆಗೆ ಮುಂದಾಗಿದೆ. ಇದೇ ಬರುವ 10 ಅಕ್ಟೋಬರ್ ಮಂಗಳವಾರ ಬೆಳಗ್ಗೆ 9.30 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಿಂದ ದೇಯಿಬೈದೇತಿ ಔಷಧವನ ತನಕ ಈ ಅಪಮಾನ ಖಂಡಿಸಿ, ಹಿಂದೂ ಧರ್ಮದ ಶ್ರದ್ಧಾ ಕೇಂದ್ರದ ಮೇಲಿನ ಅಪಮಾನ ಖಂಡಿಸಿ ಪಾದಾಯಾತ್ರೆ ನಡೆಯಲಿದೆ. ಪಾದಾಯಾತ್ರೆಯ ನೇತೃತ್ವವನ್ನು ಸಂಸದ ನಳೀನ್ ಕುಮಾರ್ ಕಟೀಲ್ ವಹಿಸಲಿದ್ದಾರೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response