Recent Posts

Sunday, January 19, 2025
ಸುದ್ದಿ

5ಮಂದಿ ಯುವಕರ ತಂಡದಿಂದ ಓರ್ವನ ಮೇಲೆ ಹಲ್ಲೆ – ಕಹಳೆ ನ್ಯೂಸ್

ಮೂಡಬಿದಿರೆ: ಸೋಮವಾರ ಬೆಳ್ಳಂಬೆಳಗ್ಗೆ ಮೂಡಬಿದಿರೆ ಸಮೀಪದ ಗಂಟಾಲ್ ಕಟ್ಟೆಯಲ್ಲಿ ಇಬ್ರಾಹಿಂ(39)ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

ಇನ್ನೋವಾ ಕಾರಿನಲ್ಲಿ ಬಂದ 5ಮಂದಿಯ ತಂಡ ಈ ಕೃತ್ಯ ಎಸಗಿದೆ. ಘಟನೆಯಿಂದಾಗಿ ಇಬ್ರಾಹಿಂ ಅವರ ತಲೆ, ಬಲಭುಜ ಹಾಗೂ ಎಡಕೈಗಳಿಗೆ ಗಾಯಗಳಾಗಿವೆ. ಯುವಕರ ತಂಡ ಈ ಕೃತ್ಯ ಎಸಗಿದೆ ಎಂದು ಮೂಡಬಿದಿರೆ ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಟಾಲ್ಕಟ್ಟೆ ಮಸೀದಿ ಸಮೀಪದಲ್ಲೇ ಇರುವ ಬದ್ರಿಯಾ ಹೊಟೇಲ್‍ನಲ್ಲಿ ಇಬ್ರಾಹಿಂ ಅಡುಗೆ ಸಹಾಯಕನಾಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಗೊಳಗಾದ ಇಬ್ರಾಹೀಂ ಎಂಬಾತ ಈ ಹಿಂದೆ ಮೂಡಬಿದಿರೆಯಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಎಂದು ಹೇಳಲಾಗಿದೆ. ಗಾಯಕ್ಕೊಳಗಾದ ಇಬ್ರಾಹಿಂನನ್ನು ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸೋಮವಾರ ಬೆಳಗ್ಗೆ 6ಗಂಟೆಗೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗಿ ಬಂದೋಬಸ್ತ್

ಮೂಡಬಿದಿರೆ ಪೊಲೀಸರು ಘಟನಾ ಸ್ಥಳವೂ ಸೇರಿದಂತೆ ಆಯಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ನಿಯೋಜನೆಗೊಳಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.

ವಿಚಾರಣೆ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಶೀಘ್ರ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.