Monday, November 25, 2024
ರಾಜ್ಯರಾಷ್ಟ್ರೀಯಸುದ್ದಿ

‘ದಿ ಕೇರಳ ಸ್ಟೋರಿ’ ತಡೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ.! ‘ನಿಮಗೆ ಹಾಗೆ ಅನಿಸಿದರೆ ನೀವು ಸಿನಿಮಾ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು’ – ಕಹಳೆ ನ್ಯೂಸ್

ದೇಶದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ ‘ದಿ ಕೇರಳ ಸ್ಟೋರಿ’ (The Kerala Story) ಗೆ ತಡೆ ನೀಡಬೇಕು ಎಂದು ಸುಪ್ರೀಂ ಕೋರ್ಟಿಗೆ (Supreme Court) ಅರ್ಜಿ ಸಲ್ಲಿಕೆಯಾಗಿತ್ತು.

ಆದರೆ, ಅರ್ಜಿ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಯಮೂರ್ತಿಗಳಾದ ಕೆ.ಎಂ. ಜೊಸೆಫ್ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆಯನ್ನು ನಿರಾಕರಿಸಿದ್ದು, ನೀವು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಿನಿಮಾದಲ್ಲಿ ದ್ವೇಷ ಪೂರಿತ ಸಂಭಾಷಣೆ ಹಾಗೂ ಪ್ರೊಪೊಗಾಂಡ ಸಿನಿಮಾ ಎಂದು ವಕೀಲ ನಿಜಾಮ್ ಪಾಷಾ (Pasha) ವಾದಿಸಿದ್ದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ‘ನಿಮಗೆ ಹಾಗೆ ಅನಿಸಿದರೆ ನೀವು ಸಿನಿಮಾ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು’ ಎಂದು ತಿಳಿಸಿದೆ. ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಎಂದರು. .

ಸಿನಿಮಾ ವಿರುದ್ಧ ಕಪೋಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಮಾಡಲಾಗಿದೆ ಎನ್ನುವ ಆರೋಪ ಹಲವರದ್ದು. ಒಂದು ಧರ್ಮವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇಂತಹ ಚಿತ್ರವನ್ನು ರಿಲೀಸ್ ಮಾಡದಂತೆ ಕೇರಳದ ಅನೇಕ ಸಂಘಟನೆಗಳು ಒತ್ತಾಯಿಸಿವೆ. ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಮೇ 5ಕ್ಕೆ ಬಿಡುಗಡೆ ಆಗತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.