Friday, January 24, 2025
ಬೆಂಗಳೂರುರಾಜಕೀಯರಾಜ್ಯ

ಮಗನ ಮಾತುಗಳನ್ನು ಕೇಳಿ ಸಿಳ್ಳೆ ಹಾಕಿ ಸಂಭ್ರಮಿಸಿದ ಸಚಿವ ಆನಂದ್​ ಸಿಂಗ್​ – ಕಹಳೆ ನ್ಯೂಸ್

ವಿಜಯನಗರ: ವಿಜಯನಗರದ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಗನ ಮಾತುಗಳನ್ನು ಕೇಳಿ ಸಚಿವ ಆನಂದ್​ ಸಿಂಗ್​ ಸಿಳ್ಳೆ ಹಾಕಿ ಸಂಭ್ರಮಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ನಿನ್ನೆ ಬಿಜೆಪಿ ಸಮಾವೇಶ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆನಂದ್​ ಸಿಂಗ್​ ಪುತ್ರ ಸಿದ್ದಾರ್ಥ್​ ಸಿಂಗ್​ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಾಮಾನ್ಯ ಕಾರ್ಯಕರ್ತನಂತೆ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತಿದ್ದ ಆನಂದ್​ ಸಿಂಗ್​ ಮಗನ ಮಾತುಗಳನ್ನು ಸಿಳ್ಳೆ ಹಾಕಿ ಸಂಭ್ರಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನಂದ್​ ಸಿಂಗ್​ ಸಿಳ್ಳೆ ಹಾಕಿ ಸಂಭ್ರಮಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂದಹಾಗೆ ಈ ಬಾರಿ ಬಿಜೆಪಿಯಿಂದ ಆನಂದ್​ ಸಿಂಗ್​ ಟಿಕೆಟ್​ ಪಡೆದಿಲ್ಲ. ಬದಲಾಗಿ ತಮ್ಮ ಪುತ್ರನಿಗೆ ಟಿಕೆಟ್​ ಕೊಡಿಸುವಲ್ಲಿ ಆನಂದ್​ ಸಿಂಗ್​ ಯಶಸ್ವಿಯಾಗಿದ್ದಾರೆ. ಮಗನ ಪರ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.