Sunday, November 24, 2024
ರಾಜಕೀಯಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಿ0ದ ಸಭ್ಯತೆ ಮೀರುವ, ಗೌರವ ಕೆಡಿಸುವ ಯತ್ನ – ವಿ. ಸುನಿಲ್ ಕುಮಾರ್ – ಕಹಳೆ ನ್ಯೂಸ್

ಕಾರ್ಕಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಬೆಂಬಲಿಗರು ಪದೇ ಪದೇ ತಮ್ಮ ಬಿಜೆಪಿಯನ್ನ ಟೀಕಿಸುವ ಹಾಗೂ ವೈಯಕ್ತಿಕ ಲಾಭಕ್ಕಾಗಿ ಸಭ್ಯತೆ ಮೀರಿ ಮಾತನಾಡುತ್ತಿದೆ, ಈ ವಿಚಾರವಾಗಿ ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಕಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪರ ಬೆಂಬಲಿಗರು ಸಾರ್ವಜನಿಕ ಸಭೆ, ವೇದಿಕೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಟೀಕೆಗಳನ್ನ ಮಾಡುವುದು, ಕೀಳು ಮಟ್ಟದ ಪದ ಪ್ರಯೋಗಿಸುತ್ತಿರುವುದನ್ನ ಮಾಡುತ್ತಿದ್ದಾರೆ. ಈ ಎಲ್ಲಾ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ ವರ್ತನೆ ಕಾರ್ಕಳದ ಗೌರವ ಕೆಡಿಸುವ ಯತ್ನವಾಗಿದೆ. ಕಾರ್ಕಳದ ಜನ ಗೌರವದಿಂದ ಬದುಕಿ ಬಾಳಿದವರು ಇಂದಿಗೂ ಅದೇ ಬದುಕನ್ನು ಮುದುವರೆಸುತ್ತಿದ್ದಾರೆ. ಮುಂದೆಯೂ ಅದನ್ನೆ ಬಯಸುವವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವದ ರಾಜಕಾರಣವನ್ನೂ ಹಿಂದಿನ ಎಲ್ಲ ಚುನಾವಣೆ ಹಾಗೂ ಕಾಲ ಘಟ್ಟದಲ್ಲಿ ನೋಡಿಕೊಂಡು ಬರಲಾಗಿದೆ. ಆದರಿಂದ ಕಾಂಗ್ರೇಸ್ ಅಭ್ಯರ್ಥಿ ಪರವಿರುವ ಕೆಲ ಬೆಂಬಲಿಗರು ರಾಜಕೀಯ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಸಭೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡು ತೀರ ಕೆಳಮಟ್ಟಕ್ಕೆ ಇಳಿದು ಟೀಕೆ ಟಿಪ್ಪಣಿಗಳಲ್ಲಿ ತೊಡಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈಯಕ್ತಿಕ ವಿಚಾರಗಳನ್ನ ಬಳಸಿಕೊಂಡು ಅಸಭ್ಯವಾಗಿ ನಡೆದುಕೊಳ್ಳಿತ್ತಿದ್ದಾರೆ. ಅಭ್ಯರ್ಥಿ ಬೆಂಬಲಿಗರ ಪದ ಬಳಕೆ ಪ್ರಚೋದನಕಾರಿ ಹೇಳಿಕೆ ಸಂದೇಶಗಳು ಎಲ್ಲೆ ಮೀರುತ್ತಿದೆ. ಅವುಗಳು ಕಾರ್ಕಳದ ಗೌರವ, ನಾಗರಿಕ ಸಮಾಜಕ್ಕೆ ಚ್ಯುತಿ ತರುವಂತಿದೆ. ಕಾರ್ಕಳದ ಜನ ಪ್ರೀತಿ ಮತ್ತು ಗೌರವದಿಂದ ಸೌಹರ್ಧತೆಯಿಂದ ಜೀವನ ನಡೆಸಿಕೊಂಡು ಬಂದವರು. ಶಾಂತಿಯ ವಾತಾವರಣ ಇಲ್ಲಿ ಈ ಹಿಂದಿನ ಎಲ್ಲ ಚುನಾವಣೆಯಲ್ಲಿ ಮತ್ತು ಅನಂತರದಲ್ಲಿಯೂ ನೆಲೆಯೂರಿತ್ತು. ವೈಯಕ್ತಿಕ ಟೀಕೆ, ಧ್ವೇಷದ ರಾಜಕಾರಣವನ್ನು ಕಾರ್ಕಳದ ನಾಗರಿಕ ಸಮಾಜ ಎಂದೂ ಬಯಸುವುದಿಲ್ಲ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೂ ಇಲ್ಲ ಎನ್ನುವ ವಿಶ್ವಾಸವಿದೆ. ಇದರಿಂದ ರಾಜಕೀಯವಾಗಿ ಲಾಭ ಪಡೆಯಬಹುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬೆಂಬಲಿಗರ ಹಗಲು ಕನಸಾಗಿದೆ.

ಕಾರ್ಕಳದ ಬಗ್ಗೆ ಕೇವಲ ಕರಾವಳಿಯಷ್ಟೇ ಅಲ್ಲ, ನಾಡಿನೆಲ್ಲೆಡೆ ಅಪಾರ ಗೌರವ ಅಭಿಮಾನವಿದೆ. ಕಾರ್ಕಳದ ಹೆಸರು ಇದೇ ಕಾರಣಕ್ಕೆ ವಿಸ್ತರಿಸಿದೆ. ಎಲ್ಲೇ ಹೋದರೂ ಜನ ಕಾರ್ಕಳದ ಬಗ್ಗೆ ಗೌರವದಿಂದ ಮಾತನಾಡುವಂತಹ ವಾತಾವರಣ ಇತ್ತೀಚಿನ ಅಭಿವೃದ್ಧಿ, ಪ್ರವಾಸಿ ತಾಣಗಳ ಪ್ರಗತಿಗಳಿಂದ ನಿರ್ಮಾಣವಾಗಿದೆ.

ಕಾರ್ಕಳ ಹೆಸರೇ ಬ್ರಾಂಡ್ ಆಗಿ ಜಗತ್ತಿನೆಲ್ಲೆಡೆ ಗಮನ ಸೆಳೆಯುತ್ತಿದೆ. ಎಲ್ಲೆ ಹೋದರೂ ಕಾರ್ಕಳದವರಾ..? ಎನ್ನುವಷ್ಟು ಮಟ್ಟಿಗೆ ಕಾರ್ಕಳಕ್ಕೆ ಗೌರವ ತಂದು ಕೊಡುವ ಕೆಲಸವಾಗಿದೆ. ಅದರೇ ಈ ಎಲ್ಲಾ ವಿಚಾರಗಳು ಅಭಿವೃದ್ಧಿ ಸಂಗತಿಗಳ ಬಗ್ಗೆ ಮಾತನಾಡುವ ಬದಲಿಗೆ ಕಾಂಗ್ರೇಸ್ ಅಭ್ಯರ್ಥಿ ಬೆಂಬಲಿಗರು ಕಾರ್ಕಳದ ಗೌರವ ಕೆಡಿಸುವ ರೀತಿಯಲ್ಲಿ ಮಾತಾನಡುತ್ತಿದ್ದಾರೆ. ಚುನಾವಣೆ ಮೇ ೧೦ಕ್ಕೆ ಮುಗಿಯಬಹುದು, ಬಳಿಕವೂ ಇಲ್ಲಿನವರು ಸಹಭಾಳ್ವೆಯಿಂದ ಒಳ್ಳೆಯ ವಾತಾವರಣದಲ್ಲಿ ಗೌರವದಿಂದ ಬದುಕಬೇಕಿದೆ.
ಕಾಂಗ್ರೇಸ್‌ನವರು ವೈಯಕ್ತಿಕ ಟೀಕೆಗಳ ಬದಲಿಗೆ ಕಾರ್ಕಳದಲ್ಲಿ ಗೌರವ ತರುವ ರೀತಿ ವರ್ತಿಸುವುದನ್ನು ರೂಢಿಸಿಕೊಳ್ಳಲಿ. ಒಳ್ಳೆಯ ವಿಚಾರಗಳ ಬಗ್ಗೆ ಚರ್ಚೆಗಳನ್ನ ಮಾಡುವ ಕಡೆ ಗಮನ ಹರಿಸಲಿ ಎಂದು ಹೇಳಿದ್ದಾರೆ.