Sunday, January 19, 2025
ಉಡುಪಿರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಒತ್ತಾಯ ; ಅನುಯಾಯಿಗಳಿಂದ ದ್ವೇಷ ವಯಕ್ತಿಕ ನಿಂದನೆ ಆರೋಪ, ಪವರ್‌ ಟಿ.ವಿ. ಟಿವಿ ಮಾಲಕನಿಂದಲೂ ತೇಜೋವಧೆ, ಕ್ರಮಕ್ಕೆ ಆಗ್ರಹ – ಕಹಳೆ ನ್ಯೂಸ್

ಕಾರ್ಕಳ,ಮೇ.3: ಸಾರ್ವತ್ರಿಕ ಚುನಾವಣೆ ನಡೆಯುವ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ, ಕುಮ್ಮಕ್ಕಿನ ಮೇರೆಗೆ ಅವರ ಅನುಯಾಯಿಗಳು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತವರಣವನ್ನು ಕಳುಷಿತಗೊಳಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕುರಿತು ಕಾರ್ಕಳ ಬಿಜೆಪಿ ಅಧ್ಯಕ್ಷ. ಮಹಾವೀರ ಹೆಗ್ಡೆ ಚುನಾವಣಾಧಿಕಾರಿಗಳಿಗೆ ಮೇ 3ರಂದು ದೂರು ನೀಡಿದ್ದಾರೆ.

ಕಾಂಗ್ರೆಸಿನ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು, ಉದಯ ಶೆಟ್ಟಿಯವರ ಪ್ರಚೋದನೆಯ ಮೇರೆಗೆ ಪರಸ್ಪರ ದ್ವೇಷ ಭಾವನೆ, ವೈಯುಕ್ತಿಕ ತೇಜೋವಧೆ, ಪೂರ್ವಾಗ್ರಹ ಪೀಡಿತ ನಿಂದನೆಗಳಲ್ಲಿ ತೊಡಗಿರುತ್ತಾರೆ. ಬಿಜೆಪಿ ಕಾರ್ಯಕರ್ತ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿಯವರ ಬಗ್ಗೆ ಖಾಸಗಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಯವರು ಮುದ್ರಿತ ವಿಡಿಯೋ ರೆಕಾರ್ಡ್‌ನ್ನು ಹರಿಯಬಿಟ್ಟಿದ್ದು, ಸದ್ರಿ ವಿಡಿಯೋದಲ್ಲಿ ರಾಜೇಶ್ ಶೆಟ್ಟಿಯವರು ವಿಖ್ಯಾತ್ ಶೆಟ್ಟಿಯವರ ಬಗ್ಗೆ ನಿಂದನಾತ್ಮಕ ಹಾಗೂ ವೈಯುಕ್ತಕ ತೇಜೋವಧೆ ಮಾಡಿ ಏಕವಚನದಲ್ಲಿ ಮಾತನಾಡಿರುತ್ತಾರೆ, ಅವರು ತಮ್ಮ ವೀಡಿಯೋದಲ್ಲಿ ನಿನ್ನ ತಂದೆಯ ಜೊತೆ ಕೇಳು ನಾನು ಯಾರು ಅಂತ. ಸುನಿಲ್ ಕುಮಾರ್‌ನ ಚಡ್ಡಿ ಒಗೆಯುವ ಜನ ನೀನು, ಕಾರ್ಕಳದ ದುಸ್ಥಿತಿಗೆ ನೀನೆ ಕಾರಣ ಎಂದು ತುಳು ಭಾಷೆಯಲ್ಲಿ ಬೈದು ತೇಜೋವಧೆ ಮಾಡಿದ್ದಲ್ಲದೇ ಪವರ್‌ ಟಿ.ವಿ.ಯ ಯೂಟೂಬ್ ಪ್ರೋಮೋದಲ್ಲಿ ಬಿಜೆಪಿ ನಾಯಕರಿಗೆ ಮುಜುಗರ ತಂದ ವಿಡೀಯೋ ಪ್ರಕರಣ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಬಲಿಗನ ವೀಡಿಯೋ ಎಂದೆಲ್ಲ ಕುರಿತು, ಶಾಸಕರ ಬೆಂಬಲಿಗನ ರಾಸಲೀಲೆ ಎಂದೆಲ್ಲಸುದ್ದಿ ಹಬ್ಬಿಸಿ ಎಲ್ಲೆಡೆ ಚರ್ಚೆ,ಸೋಶಿಯಲ್ ಮೀಡಿತಾದಲ್ಲಿ ಪೋಸ್ಟ್ ವೈರಲ್, ರಾಸಲೀಲೆ ವಿಡಿಯೋ ವಿಷಯದಿಂದ ಯೋಗಿಗೆ ಬಾರಿ ಮುಜುಗರ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಹರಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಬಿಜೆಪಿ ಕಾರ್ಯಕರ್ತನ ತೇಜೋವಧೆ ಆಗಿರುವುದು ಮಾತ್ರವಲ್ಲದೇ ಕ್ಷೇತ್ರದ ಮಹಿಳೆಯರಿಗೂ ಅಪಮಾನ ಮಾಡಿದಂತಾಗಿರುತ್ತದೆ. ವೈಯುಕ್ತಿಕ ತೇಜೋವಧೆಯ ಮೂಲಕ ಪರಸ್ಪರ ದ್ವೇಷ ಭಾವ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತವರಣವನ್ನು ಕಲುಷಿತ ಮಾಡುತ್ತಿದ್ದು, ಈ ಎಲ್ಲಾ ಸುಳ್ಳು ಹರಡುವಿಕೆಯ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷ ಉದಯ ಶೆಟ್ಟಿಯವರ ಕುಮ್ಮಕ್ಕು ಇರುವುದು ಕಂಡು ಬರುತ್ತದೆ. ಈ ರೀತಿಯ ಸುದ್ದಿ ಪ್ರಸಾರದಿಂದಾಗಿ ಉದಯ ಶೆಟ್ಟಿಯವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.