ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ,ಗುಣಮಟ್ಟದ ಶಿಕ್ಷಣದ ಪ್ರಸರಣಕ್ಕಾಗಿ ಸುಮಾರು 70ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದಿದೆ.ಶಿಕ್ಷಣಕ್ಕೊಂದು ಹೊಸ ಭಾಷ್ಯವನ್ನು ನೀಡುವ ಹಿನ್ನೆಲೆಯಲ್ಲಿ ಈ ಎಲ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.ವಿವೇಕಾನಂದ ವಿದ್ಯಾವರ್ಧಕ ಸಂಘ ರೂಪಿಸಿದ ಅಂತಹ ಉತ್ಕೃಷ್ಟ ತಾಣಗಳಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ನರೇಂದ್ರ ಪ.ಪೂ.ಕಾಲೇಜು ಕೂಡ ಒಂದು.
ಸ್ಥಳೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ 2017ರಲ್ಲಿ ತೆಂಕಿಲದ ವಿವೇಕನಗರದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ,ಎಪ್ರಿಲ್ 6ರ 2019ರಂದು ಲೋಕಾರ್ಪಣೆಗೊಂಡು, ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ನೂತನ ಕಟ್ಟಡದಲ್ಲಿ ಶೈಕ್ಷಣಿಕ ತರಗತಿಗಳನ್ನು ನಡೆಸುತ್ತಿದೆ.ಪ್ರಶಾಂತ ಮತ್ತು ಕಲಿಕೆಗೆ ಪೂರಕ ವಾತಾವರಣದಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಅನುಭವಿ ಶಿಕ್ಷಕರ ತಂಡ ಮಾತ್ರವಲ್ಲದೇ ಸುಸಜ್ಜಿತ ಗ್ರಂಥಾಲಯ ಮತ್ತು ಎಲ್ಲಾ ಉಪಕರಣಗಳನ್ನೊಳಗೊಂಡ ಪ್ರಯೋಗಾಲಯವನ್ನು ಹೊಂದಿದೆ. ಸಮರ್ಥ ಆಡಳಿತ ಮಂಡಳಿ ಎಲ್ಲಾ ಶೈಕ್ಷಣಿಕ ಕರ‍್ಯಕ್ರವiಗಳಿಗೆ ಅತ್ಯುತ್ತಮ ಮಾರ್ಗದರ್ಶನವನ್ನು ನೀಡುತ್ತಿದೆ. ಶಿಕ್ಷಣದ ಮೂಲಕ ವಿದ್ಯಾರ್ಥಿಯ
ಬೌಧ್ಧಿಕ,ಸಾಮಾಜಿಕ,ಭೌತಿಕ,ಆರ್ಥಿಕ,ಧಾರ್ಮಿಕ,ಸಾಂಸ್ಕೃತಿಕ,ನೈತಿಕ,ಆಧ್ಯಾತ್ಮಿಕ ಮೌಲ್ಯಗಳಿಂದ ಪ್ರಬಲವಾಗಿರುವ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಸದೃಢರನ್ನಾಗಿ ಬೆಳೆಸುವ ಉದ್ದೇಶವನ್ನು ಹೊಂದಿದೆ.
ವಿವಿಧ ಸಾಮಾಜಿಕ ಸ್ತರದಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಂಸ್ಕಾರ ನೀಡಿ,ಮಾನವೀಯ ಮೌಲ್ಯಗಳನ್ನು ಧಾರೆ ಎರೆದು ಸಾಂಘಿಕ ಬದುಕಿನ ಅರಿವು ಮೂಡಿಸಿ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯ ಆಂತರ್ಯದಲ್ಲಿ ಹುದುಗಿರುವ ಅನೇಕ ತೆರನಾದ ಪ್ರತಿಭೆಗಳಿಗೆ ವಿವಿಧ ರೂಪದಲ್ಲಿ ಅವಕಾಶವನ್ನು ನೀಡಲಾಗಿದೆ.
ವಿಜ್ಞಾನ ವಿಭಾಗದಲ್ಲಿ
• ಪಿಸಿಎಂಬಿ/PCMB(ಭೌತಶಾಸ್ತ,ರಸಾಯನಶಾಸ್ತ,ಗಣಿತ,ಜೀವಶಾಸ್ತ)
• ಪಿಸಿಎಂಸಿ/PCMC (ಭೌತಶಾಸ್ತç,ರಸಾಯನಶಾಸ್ತç,ಗಣಿತ,ಗಣಕವಿಜ್ಞಾನ)
ವಾಣಿಜ್ಯ ವಿಭಾಗದಲ್ಲಿ
• ಎಸ್‌ಇಬಿಎ/SEBA(ಸAಖ್ಯಾಶಾಸ್ತ,ಅರ್ಥಶಾಸ್ತ,ವ್ಯವಹಾರಅಧ್ಯಯನ,ಲೆಕ್ಕಶಾಸ್ತ,)
• ಬಿಇಬಿಎ/BEBA(ಮೂಲಗಣಿತ,ಅರ್ಥಶಾಸ್ತ,ವ್ಯವಹಾರ ಅಧ್ಯಯನ,ಲೆಕ್ಕಶಾಸ್ತ,)
ಎಂಬ ಸಂಯೋಜನೆಗಳನ್ನು ಹೊಂದಿದೆ.ಇOಗ್ಲಿಷ್ ಭಾಷೆ ಜೊತೆಗೆ ಇನ್ನುಳಿದಂತೆ ಕನ್ನಡ,ಹಿಂದಿ,ಸOಸ್ಕೃತ ಭಾಷೆಯನ್ನು ಆರಿಸಿಕೊಳ್ಳಬಹುದಾಗಿದೆ.
ಅತ್ಯುತ್ತಮ ಫಲಿತಾಂಶ:2022-23 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ.98 ಫಲಿತಾಂಶವನ್ನು ಪಡೆದಿದೆ.34 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.ದ್ವಿತೀಯ ವಾಣಿಜ್ಯ ವಿಭಾಗದ ಪಲ್ಲವಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ಐದನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ. ಈ ಅತ್ಯುತ್ತಮ ಫಲಿತಾಂಶವು ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ಕೋಚಿಂಗ್ ಮತ್ತು ಶುಲ್ಕ ವಿನಾಯಿತಿ:ವಾರಾಂತ್ಯದಲ್ಲಿ ಜೆಇಇ ,ನೀಟ್,ಸಿಇಟಿ,ಸಿಪಿಟಿ ತರಗತಿಗಳನ್ನು ನೀಡುವ ಮುಖಾಂತರ ರಾಷ್ಟಮಟ್ಟದ ಪ್ರವೇಶ ಪರೀಕ್ಷೆಗಳನ್ನು ಮತ್ತು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ. ಜೊತೆಗೆ ಎಸೆಸೆಲ್ಸಿಯಲ್ಲಿ ಶೇ.98ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.
ಸಂಸ್ಕಾರಯುತ ಶಿಕ್ಷಣ ಮತ್ತು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವ್ಯವಸ್ಥೆ:ವಿದ್ಯಾರ್ಥಿಗಳಿಗಾಗಿ ಸೂರ್ಯನಮಸ್ಕಾರ,ಧ್ಯಾನ,ಪ್ರಾಣಾಯಾಮ,ಭವದ್ಗೀತಾ ಪಠಣ,ವಿಷ್ಣು ಸಹಸ್ರನಾಮ ಪಠಣ, ಸಾಫ್ಟ್ ಸ್ಕಿಲ್ ,ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ನಡೆಸುವುದರ ಜೊತೆಗೆ ವಿದ್ಯಾರ್ಥಿ ಸಮುದಾಯದಲ್ಲಿ ಓರಣದ ನಡೆತೆ,ಸುಹವ್ಯಾಸ,ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಯೋಗ ,ಧ್ಯಾನ ತರಗತಿಯು ವಿದ್ಯಾರ್ಥಿಯ ನೆನಪಿನ ಶಕ್ತಿ ಹಾಗೂ ಓದಿನಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವಂತೆ ಮಾಡಲು ಸಹಕಾರಿಯಾಗಿದೆ.ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಲೇಜಿನಲ್ಲಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಸದೃಢ ಭವಿಷ್ಯದ ನಿರ್ಮಾಣಕ್ಕಾಗಿ Digital Class
ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯಾದ ಐಟಿ(Information Technology) ಕೋರ್ಸ್ಗಳನ್ನು ನಡೆಸುತ್ತಿದ್ದು , ಉನ್ನತ ಶಿಕ್ಷಣಕ್ಕೆ ಅಗತ್ಯವಾದ ವಿಚಾರಗಳ , ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಲಿರುವ ಒಂದು ವೇದಿಕೆಯಾಗಿದೆ.ಈ ತರಗತಿಗಳಲ್ಲಿಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಂಡಿರುವ ಶಿಕ್ಷಣ ವ್ಯವಸ್ಥೆಗೆ ಅಗತ್ಯವಾದ ತಂತ್ರಜ್ಞಾನಗಳ ಬಗ್ಗೆ,ಜೊತೆಗೆBasics of Information Technology,Input, Output and Storage Devices,Microsoft Office Packages-Microsoft Office Paint,Microsoft Office Word,Microsoft Office Excel,Microsoft Office Power point,Networking Basics,INTERNET ,Mobile communication,Web designing,Tally ERP 9,Photo editing using PHOTOSHOP,Corel Draw,Programming Languages C, C++,Python,Nudi 4.0,Data Base concepts ಇನ್ನಿತರ ವಿಚಾರಗಳ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತಿರುವ ಪುತ್ತೂರಿನ ಏಕೈಕ ಶಿಕ್ಷಣ ಸಂಸ್ಥೆ ನರೇಂದ್ರ ಪ.ಪೂ. ಕಾಲೇಜು.
ಎಲ್ಲಾ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಆಧುನಿಕ ಹಾಗೂ ಸಾಂಪ್ರದಾಯಿಕ ಶೈಕ್ಷಣಿಕ ಮೌಲ್ಯಗಳನ್ನು ಸಮರ್ಪಕ ಪ್ರಮಾಣದಲ್ಲಿ ಅನುಷ್ಠಾನಗೊಳಿಸುತ್ತಿದೆ ನರೇಂದ್ರ ಪ.ಪೂ. ಕಾಲೇಜು.
ವ್ಯವಸ್ಥೆ ,ಸೌಲಭ್ಯ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಈ ಸಂಸ್ಥೆಯು ಅತ್ಯಲ್ಪ ಅವಧಿಯಲ್ಲಿಯೇ ಪ್ರತಿಷ್ಠಿತ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿದೆ.
ದಾಖಲಾತಿ ಆರಂಭ: ಈಗಾಗಲೇ ಪ್ರಥಮ ಪಿಯುಸಿಗೆ ದಾಖಲಾತಿ ಆರಂಭಗೊಂಡಿದ್ದು,ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್ www.narendrapu.vivekanandaedu.org ಅಥವಾ ಮೊಬೈಲ್ ಸಂಖ್ಯೆ:9481917888,08251-298555ನ್ನು ಸಂಪರ್ಕಿಸಬಹುದು. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.