Sunday, January 19, 2025
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

RSS ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ ನಿಧನ ; ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ (71) ಮೇ.4 ರಂದು ನಿಧನರಾದರು.

ಜನಸಂಘದ ಕಾಲದಲ್ಲಿ ಸಕ್ರೀಯರಾಗಿದ್ದು, ತಮ್ಮ ಮನೆಯನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಮಾಡಿಕೊಂಡಿದ್ದ ದಿ. ದೇವದಾಸ್ ಭಕ್ತ ಅವರ ಪುತ್ರ ರಾಧಾಕೃಷ್ಣ ಭಕ್ತ ತನ್ನ ತಂದೆಯ ಮಾರ್ಗದರ್ಶದನಲ್ಲೇ ಮುಂದುವರಿದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯ ಮುಖ್ಯ ರೂವಾರಿಯಾಗಿ, ಸಂಚಾಲಕರಾಗಿ, ಪುತ್ತೂರು ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರಾಗಿದ್ದು ಹಲವು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಖಿಲ ಭಾರತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ದೇವಾಲಯಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು.

ಮೃತರು ಪತ್ನಿ ಲಕ್ಷ್ಮಿಭಕ್ತ, ಪುತ್ರಿ ಅಶ್ವಿನಿ ಭಕ್ತ, ಸಹೋದರರಾದ ಯೋಗೀಶ್ ಭಕ್ತ, ಗುರುದತ್ ಭಕ್ತ ಮತ್ತು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

ರಾಧಾಕೃಷ್ಣ ಭಕ್ತ ಅವರ ಪಾರ್ಥಿವ ಶರೀರವನ್ನು ಕೋರ್ಟ್ ರಸ್ತೆಯಲ್ಲಿರುವ ಮನೆಯಲ್ಲಿ ಇರಿಸಲಾಗಿದ್ದು, ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೃತರ ಸಹೋದರ ಯೋಗೀಶ್ ಭಕ್ತ ತಿಳಿಸಿದ್ದಾರೆ.