Sunday, November 24, 2024
ಸುದ್ದಿ

ಹೈದರಾಬಾದ್‌ಗೆ ತವರಿನಲ್ಲಿ ಮುಖಭಂಗ, ಕೋಲ್ಕತ್ತಾಗೆ ರೋಚಕ ಜಯ – ಕಹಳೆ ನ್ಯೂಸ್

ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲನ್ನಪ್ಪಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೊನೆಯಲ್ಲಿ ಕೊಂಚ ಎಡವಿತು. ಇದರ ಲಾಭ ಪಡೆದ ಕೆಕೆಆರ್ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲನ್ನಪ್ಪಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ಕೋಲ್ಕತ್ತಾ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಹೈದರಾಬಾದ್ ಪರ, ಮಯಾಂಕ್ ಅಗರ್ವಾಲ್ 18 ರನ್, ಅಭಿಷೇಕ್ ಶರ್ಮಾ 9 ರನ್, ಏಡೆನ್ ಮಾರ್ಕ್ರಾಮ್ 40 ಎಸೆತದಲ್ಲಿ 4 ಫೊರ್ ಮೂಲಕ 41 ರನ್ ಗಳಿಸಿದರು, ಹೆನ್ರಿಚ್ ಕ್ಲಾಸೆನ್ 36 ರನ್, ಹ್ಯಾರಿ ಬ್ರೂಕ್ ಶೂನ್ಯ, ರಾಹುಲ್ ತ್ರಿಪಾಠಿ 20 ರನ್, ಅಬ್ದುಲ್ ಸಮದ್ 21 ರನ್, ಮಾರ್ಕೊ ಜಾನ್ಸೆನ್ 1 ರನ್, ಮಯಾಂಕ್ ಮಾರ್ಕಾಂಡೆ 1 ರನ್ ಮತ್ತು ಭುವನೇಶ್ವರ್ ಕುಮಾರ್ 5 ರನ್ ಗಳಿಸಿದರು.
ಕೆಕೆಆರ್ ಪರ ರಿಂಕು ಸಿಂಗ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಕೋಲ್ಕತ್ತಾ ಆರಂಭದಲ್ಲೇ ಆಘಾತ ಎದುರಿಸಿತು. ಮಾರ್ಕೊ ಜಾನ್ಸೆನ್ ಆರಂಭದಲ್ಲಿಯೇ ಆಘಾತ ನೀಡಿದರು. ಕೆಕೆಆರ್ ಓಪನರ್ ಗುರ್ಬಾಜ್ ಅವರನ್ನು ಡಕೌಟ್ ಮಾಡಿದ ಅವರು, ವೆಂಕಟೇಶ್ ಅಯ್ಯರ್ (7) ಅವರನ್ನು ಔಟ್ ಮಾಡಿದರು. ಇದರೊಂದಿಗೆ ಕೆಕೆಆರ್ 16 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ಜೇಸನ್ ಸ್ವಲ್ಪ ಪ್ತರಿರೋದ ತೋರಿಸಿದರು. ಆದರೆ ಅಪಾಯಕಾರಿಯಾಗುತ್ತಿದ್ದ ಜೇಸನ್ ರಾಯ್ ಅವರನ್ನು ಕಾರ್ತಿಕ್ ತ್ಯಾಗಿ ಉರುಳಿಸಿದರು. 20 ರನ್ ಗಳಿಸಿದ್ದ ಜೇಸನ್ ರಾಯ್ ಕಾರ್ತಿಕ್ ತ್ಯಾಗಿ ಬೌಲಿಂಗ್ ನಲ್ಲಿ ಮಯಾಂಕ್ ಅಗರ್ವಾಲ್ ಗೆ ಕ್ಯಾಚ್ ನೀಡಿ ಔಟಾದರು. ಇದರಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ 35 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು.

ಆದರೆ ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ತಂಡಕ್ಕೆ ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಬೆಂಬಲ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ನೀಡಿದರು. ಆದರೆ, ಅಪಾಯಕಾರಿ ಜೋಡಿಯನ್ನು ಕ್ಯಾಪ್ಟನ್ ಮಾರ್ಕ್ರಾಮ್ ಬೇರ್ಪಡಿಸಿದರು. ನಿತೀಶ್ 31 ಎಸೆತಗಳಲ್ಲಿ 42 ರನ್ ಗಳಿಸಿ ಔಟ್ ಆದರು. ನಂತರ ಬಂದ ರಸೆಲ್ 15 ಎಸೆತಗಳಲ್ಲಿ 24 ರನ್ ಗಳಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸುನಿಲ್ ನರೈನ್ ಕೇವಲ 1 ರನ್ ಗಳಿಸಿ ಭುವನೇಶ್ವರ್ ಬೌಲಿಂಗ್‌ನಲ್ಲಿ ಔಟ್ ಆದರು. ಆದರೆ ಅಂತಿಮ ಹಂತದವರೆಗೂ ಇದ್ದ ರಿಂಕು ಸಿಂಗ್ 35 ಎಸೆತಗಳಲ್ಲಿ 46 ರನ್ ಗಳಿಸಿದರು, ಈ ವೇಳೆ ಅವರ ಬ್ಯಾಟ್‌ನಿಂದ 4 ಬೌಂಡರಿ, 1 ಸಿಕ್ಸರ್ ಹೊರಬಂದಿತ್ತು.
ಮತ್ತೆ ಮಿಂಚಿದ ಬೌಲರ್‌ಗಳು : ಐಪಿಎಲ್ ಎಂದಾಕ್ಷಣ ಕೇವಲ ಬ್ಯಾಟರ್‌ಗಳ ಅಬ್ಬರ ನೆನಪಾಗುತ್ತದೆ. ಆದರೆ ಈ ಬಾರಿ ಬೌಲರ್‌ಗಳೂ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳಾದ ಮಾರ್ಕೊ ಜಾನ್ಸೆನ್ ಮತ್ತು ನಟರಾಜನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಮಾರ್ಕರಮ್ ಮತ್ತು ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಪಡೆದು ಅಬ್ಬಿರಿಸಿದರು. ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಹರ್ಷಿತ್ ರಾಣಾ 1 ವಿಕೆಟ್, ಆ್ಯಡ್ರೂ ರಸೆಲ್ 1 ವಿಕೆಟ್, ಅನ್ಕುಲ್ ರಾಯ್ 1 ವಿಕೆಟ್, ಶಾರ್ದೂಲ್ ಠಾಕೂರ್ ಮತ್ತು ವೈಭವ್ ಅರೋರ ತಲಾ 2 ವಿಕೆಟ್ ಪಡೆದು ಮಿಂಚಿದರು.

ಕೋಲ್ಕತ್ತಾಗೆ ಗೆಲುವು