Saturday, January 18, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

ಮೇ.06 ರಂದು ಬಿ.ಸಿ.ರೋಡ್‌ನ‌ಲ್ಲಿ ಯೋಗಿ ರೋಡ್‌ ಶೋ ; ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಪರ ಪ್ರಚಾರಕ್ಕೆ ಬರದ ಸಿದ್ದತೆ – ಕಹಳೆ ನ್ಯೂಸ್

ಬಂಟ್ವಾಳ, ಮೇ 05 : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೇ. 06 ರಂದು ಸಂಜೆ 4 ಗಂಟೆಗೆ ಬಿ.ಸಿ. ರೋಡ್‌ನ‌ಲ್ಲಿ ರೋಡ್‌ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯ ಜತೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಾರದು ಎಂಬ ದೃಷ್ಟಿಯಿಂದ ಮಂಗಳೂರು-ಬಿ.ಸಿ. ರೋಡ್‌ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಎಂ ಯೋಗಿ ಅವರು ಹೆಲಿಕಾಪ್ಟರ್‌ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್‌ ಕಾಲೇಜಿನ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್‌ ಮೂಲಕ ಕೈಕಂಬಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್‌ ನಿಲ್ದಾಣದವರೆಗೆ ರೋಡ್‌ ಶೋ ನಡೆಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ರೋಡ್‌ ಶೋ ಸಾಗುವ ಹಾದಿಯುದ್ದಕ್ಕೂ ಬ್ಯಾರಿಕೇಡ್‌ ಹಾಕಲಿದ್ದು, ಅಲ್ಲಲ್ಲಿ ಅಳವಡಿಸಲಾಗುವ ಮೆಟಲ್‌ ಡಿಟೆಕ್ಟರ್‌ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭದ್ರತೆಯ ಹಿನ್ನೆಲೆಯಲ್ಲಿ ರೋಡ್‌ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸಲಿದ್ದಾರೆ.