Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

“ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಧನಾತ್ಮಕ ಚಿಂತನೆಯಲ್ಲಿ ಮತಚಲಾವಣೆ ಮಾಡೋಣ” – ಮುಂಬೈ ಉತ್ತರದ ಸಂಸದ ಗೋಪಾಲ್ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು: “ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕ ಮುಂದಿದೆ. 3ನೇ ಬಾರಿ ಕೇಂದ್ರದ ಮೋದಿ ಆಡಳಿತಕ್ಕೆ ಕರ್ನಾಟಕದ ಬೆಂಬಲ ಬೇಕು” ಎಂದು ಮುಂಬೈ ಉತ್ತರದ ಸಂಸದ ಗೋಪಾಲ್ ಶೆಟ್ಟಿ ಅವರು ಹೇಳಿದರು.

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಧಾಕೃಷ್ಣ ಭಕ್ತ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬಳಿಕ “ನಾನು ಜಿಲ್ಲೆಯ ಪ್ರಚಾರಕ್ಕೆ ಎರಡನೇ ಭಾರಿ ಬಂದಿದ್ದೇನೆ. 1992 ಪ್ರಥಮವಾಗಿ ಪಾರ್ಟಿ ನನಗೆ ಸಮಾಜ ಸೇವೆ ಮಾಡಲು ಅವಕಾಶ ನೀಡಿತ್ತು. ವಿಶೇಷತೆ ಎಂದರೆ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಆಡಳಿತ ಮಾಡುತ್ತಿದೆ. 2 ಬಾರಿ ಕಾರ್ಪೋರೇಟ್ ಆಗಿ, ಎರಡನೆಯ ಬಾರಿ ಶಾಸಕ, ಎರಡು ಬಾರಿ ಸಂಸದನಾಗಿ ಅವಕಾಶ ನೀಡಿದೆ. ಹಾಗೆ ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿ ಗುರುತಿಸಿ ಅವಕಾಶ ನೀಡುತ್ತಿದೆ. ಪುತ್ತೂರಿನಲ್ಲಿ ಮಹಿಳೆಗೆ ಅವಕಾಶ ನೀಡಿದೆ. ಆಶಾ ತಿಮ್ಮಪ್ಪ ಅವರಿಗೆ ಧನಾತ್ಮಕ ಚಿಂತನೆಯಲ್ಲಿ ಮತಚಲಾವಣೆ ಮಾಡೋಣ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಚುನಾವಣಾ ನಿರ್ವಹಣಾ ಸಂಚಾಲಕ ಅಪ್ಪಯ್ಯ ಮಣಿಯಾಣಿ, ಮಾದ್ಯಮ ಪ್ರಮುಖ್ ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು