ಮಂಗಳೂರು : ನಗರದಲ್ಲಿ ಕಟ್ಟಡ ಕಾಮಗಾರಿ ಹಾಗೂ ಇನ್ನಿತರ ಕೆಲಸದ ನಿಮಿತ್ತ ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಹೀಗೆ ಹಲವು ಭಾಗಗಳಿಂದ ಆಗಮಿಸಿ ನಗರದಲ್ಲಿ ಭಾಷೆಯ ಸಮಸ್ಯೆಯಿಂದಾಗಿ ಕಂಗೆಡುವ ಮಂದಿಗೆ ಇದೀಗ ನೆರವಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗಿದೆ.
ಹಿಂದಿ, ತಮಿಳು, ತೆಲುಗು ಮಾತನಾಡುವ ಕೂಲಿ ಕಾರ್ಮಿಕರು ನಗರದಲ್ಲಿ ಭಾಷಾ ಸಮಸ್ಯೆಯಿಂದಾಗಿ ಅವರ ಮೂಲ ಸ್ಥಾನವನ್ನು ಸೇರುವಲ್ಲಿ ತೊಂದರೆಗಳು ಉಂಟಾದಾಗ ಪೊಲೀಸ್ ಇಲಾಖೆಗೆ ಅವರು ಕರೆ ಮಾಡಿದಲ್ಲಿ ಕೂಡಲೇ ಪೊಲೀಸರು ಆಗಮಿಸಿ ಅವರಿಗೆ ನೆರವಾಗುವ ವ್ಯವಸ್ಥೆಯೊಂದನ್ನು ಪೊಲೀಸ್ ಇಲಾಖೆ ಪರಿಚಯಿಸಿದೆ.
ಇದೀಗ ಹೊಯ್ಸಳ ವಾಹನದಲ್ಲಿ ಇಂತಹ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಹೊಯ್ಸಳ ಪೊಲೀಸರ ತಂಡವು ಈ ವಿಶೇಷ ಕಾರ್ಯಾಚರಣೇಯಲ್ಲಿ ಕೈ ಜೋಡಿಸಿದ್ದು, ವಲಸೆ ಕಾರ್ಮಿಕರಿಗೆ ನೆರವಾಗಿದೆ.
ಇದೀಗ ನಗರದಲ್ಲಿ ಮೈಕ್ ಮೂಲಕ ಇಂತಹ ಕಾರ್ಮಿಕರು ಇರುವ ಸ್ಥಳದಲ್ಲಿ ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಪೊಲೀಸ್ ಕಂಟ್ರೋಲ್ ಗೆ 112 ನಂಬರ್ ಗೆ ಕರೆ ಮಾಡಿ ತಿಳಿಸಿದ್ದಲ್ಲಿ ಪೊಲೀಸರು ಬಂದು ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದಾಗಿ ಪ್ರಚಾರ ಪಡಿಸುತ್ತಿದ್ದಾರೆ.