ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ವಿವಿಧ ಪಕ್ಷಗಳು ಬೇರೆ ಬೇರೆ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ.
ಬೆಂಗಳೂರು : ವಿಧಾನಸಭಾ ಚುನಾವಣಾ ಹತ್ತಿರವಾಗ್ತಾ ಇದ್ದು ರಾಜಕೀಯ ಪಜಕ್ಷಗಳು ಭರ್ಜರಿ ಮತ ಪ್ರಚಾರ ಮಾಡುತ್ತಾ, ವಿವಿಧ ಬೇಡಿಕೆ ಇಡೇರಿಸುವ ಪ್ರಣಾಲಿಕೆ ಬಿಡುಗಡೆ ಮಾಡುತ್ತಿದ್ದಾರೆ. ಗೆಲುವಿಗಾಗಿ ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತುಗಳನ್ನ ವಿವಿಧ ಪಕ್ಷಗಳು ನಡೆಸುತ್ತಿವೆ.
ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ತನ್ನ ಪ್ರಣಾಳಿಕೆಯಲ್ಲಿ ವಿನೂತನ ಭಾಗ್ಯವೊಂದನ್ನ ನೀಡಿದ್ದು, ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ. ಅರಭಾವಿ ಕ್ಷೇತ್ರದ ಮದುವೆಯಾಗದ ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸಲಾಗುವುದು.
ವಧು-ವರರ ಮದುವೆ ಭಾಗ್ಯ ಯೋಜನೆ 2023 ಗ್ಯಾರಂಟಿ 100 ಎಂದು ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಜೊತಗೆ ಶ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಸೇರಿ ಹಲವು ಭರವಸೆಗಳು ಇವರ ಪ್ರಣಾಳಿಕೆಯಲ್ಲಿದೆ.
ಸದ್ಯ ಪಕ್ಷೇತರ ಅಭ್ಯರ್ಥಿಯ ಈ ಪ್ರಣಾಳಿಕೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.