ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ಇಂದು ಕೊನೆಯ ದಿನವಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನದ ಅವಕಾಶ ಆಯೋಗ ಕಲ್ಪಿಸಿತ್ತು. ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು. ಇದುವರೆಗೆ ರಾಜ್ಯದಲ್ಲಿ ಒಟ್ಟು 91,386 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
ಒಟ್ಟು 99,529ಮಂದಿ ಈ ಸೌಲಭ್ಯಕ್ಕೆ ಹೆಸರು ನೋಂದಾಯಿಸಿಕೊoಡಿದ್ದರು. 80ವರ್ಷ ಮೇಲ್ಪಟ್ಟ 80,250 ಮಂದಿಯಲ್ಲಿ ಶೇ.73.743ರಷ್ಟು, 19,279 ವಿಕಲಚೇತನರ ಪೈಕಿ 17,943ಮಂದಿ ಮತ ಚಲಾಯಿಸಿದ್ದಾರೆ ಎಂದು ಆಯೋಗ ತಿಳಿಸಿದೆ.